ಬನವಾಸಿಯಲ್ಲಿ ಪೇಚಾಟ!

ಎಲ್ಲರಿಗೂ ನಮಸ್ಕಾರ!🙏

ನಾನು ಅರಣ್ಯ ಮಹಾವಿದ್ಯಾಲಯ, ಶಿರಸಿಯಲ್ಲಿ ೩ನೇ ವರ್ಷದ ಅರಣ್ಯಶಾಸ್ತ್ರ ವಿದ್ಯಾರ್ಥಿನಿ! ನಾನು ೨ನೇ ವಷ೯ದಲ್ಲಿದ್ದಾಗ ಒಂದು ರಜೆಯ ದಿನ, ವಾರ ಪೂರ್ತಿ ನೆಡದ ತರಗತಿಗಳ ಬೇಸರ ಕಳಿಯಲು ನಾಲ್ಕು ಜನ ಗೆಳತಿಯರು ಕೂಡಿ ಅಲ್ಲೆ 25 ಕಿ.ಮೀ ದೂರದಲ್ಲಿರುವ ಬನವಾಸಿಯ ಮಧುಕೇಶನ ದರ್ಶನಕ್ಕೆ ಹೊರಟೆವು,  ನಾವು ಹೊರಟಾಗ ಸಮಯ ಮಧ್ಯಾಹ್ನ 3 ಗಂಟೆ ದಾಟ್ಟಿತ್ತು, ವಾಪಸ್ ನಮ್ಮ ವಿದ್ಯಾರ್ಥಿನಿಲಯ ಸೇರಲು ಕೊನೆ ಸಮಯ ಸಂಜೆ 7:30 ರ ವರೆಗೆ ಮಾತ್ರ. ಅಷ್ಟರೊಳಗೆ ಮರಳಿ ಬರುವುದಾಗಿ ನಿರ್ದರಿಸಿ ಹೊರಟೆವು. ಬಸ್ಗಾಗಿ ಎಷ್ಟು ಹೊತ್ತು ಕಾಲೇಜಿನ ಮುಂದೆ ಕಾದರು ಬಸ್ ಬರಲೇ ಇಲ್ಲ, ಕೊನೆಗೆ 4:20ರ ಸುಮಾರಿಗೆ kA 31 F 1383 ನೀಲಿ ಬಸ್ಸು ಬಂದಿತು, 15 ನಿಮಿಷಗಳಲ್ಲಿ ಬನವಾಸಿ ಸೇರಿದೆವು, ಬಸ್ ನಿರ್ವಾಹಕರ ಬಳಿ ಕೊನೆಯ ಶಿರಸಿ-ಬನವಾಸಿ ಬಸ್ 7:30 ರಿಂದ 8ರ ವರೆಗೆ  ಸಿಗುತ್ತವೆ ಎಂದು ತಿಳಿದು ದೇಗುಲದ ಕಡೆ ನಡೆದೆವು. ಅದು ಇಳಿ ಸಂಜೆಯ ಸಮಯವಾಗಿದ್ದರಿಂದ ಭಾವವುಕ್ಕಿ ಏನಿಸಿದ್ದು ಹೀಗೆ!

ವಿಶಾಲ ಕಲ್ಲಿನ ಗೋಪುರದಡಿಯಲಿ,
ಶಾಂತಿಯಿಂದ ಎದ್ದು ನಿಂತ ಕಂಬಗಳ ಮಧ್ಯದಲಿ, ಶಿಲೆಗಳ ಕೆತ್ತನೆಯ ಭವ್ಯ ನೋಟದಲಿ,
ವಿವಿಧ ಭಂಗಿಯ ವೈಖರಿಗಳ ಮಾಟದಲಿ, ಸೂರ್ಯಸ್ತವು ಚೆಲ್ಲುವ ಕಿರಣಗಳ ಅಂಚಿನಲಿ ಮಧುಕೇಶನ ದೇಗುಲದ ಪ್ರಕಾರದಲಿ,
ಸ್ತಬ್ದವಾಯಿತು ಮನ ಬನವಾಸಿಯಲಿ…!

ಪೂಜೆ ಮುಗಿಸಿ, ಸ್ವಲ್ಪ ಹೊತ್ತು ಅಲ್ಲೇ ಸಮಯ ಕಳೆದು, 7 ಗಂಟೆ ಸಮೀಪಿಸುತ್ತಿರುವಾಗ ಬಸ್ ನಿಲ್ದಾಣದ ಕಡೆಗೆ ಬಂದೆವು, ಬಸ್ ನಿಂತಿರುವುದನ್ನು ನೋಡಿಯೂ ಇನ್ನೂ ಸಮಯ ಬಾಕಿ ಇದೆ ಮುಂದಿನ ಬಸ್ಸಿಗೆ ಹೋದರಾಯಿತು ಎಂದು ಅಲಕ್ಷಿಸಿ  ಅಲ್ಲೇ ಇದ್ದ ಪಾನಿಪುರಿ ಗಾಡಿಯ ಬಳಿ ಜಮಾಯಿಸಿದೆವು! ಎಲ್ಲರು ತೃಪ್ತಿಯಾಗುವಷ್ಟು ಸವಿದೆವು.

ನಂತರ ನಿಲ್ದಾಣದ ಕಡೆ ಬಂದರೆ ಅಲ್ಲಿ ಬಸ್ ಇರಲಿಲ್ಲ, ಸ್ವಲ್ಪ ಹೊತ್ತು ಮತ್ತೆ ಕಾದು, ಅಲ್ಲೇ ಇದ್ದ ಅಂಗಡಿಯವರಿಗೆ ಕೇಳಿದಾಗ ಕೊನೆ ಬಸ್ಸು 7ಕ್ಕೆ ಹೊರಟು ಹೋಯಿತು ಎಂದರು. ಅಯ್ಯೋ ಆ ನಿರ್ವಾಹಕರು ತಪ್ಪು ಮಾಹಿತಿ ನೀಡಿದ್ದು ತಿಳಿದು ಜೊತೆಗೆ ನಮ್ಮ ತಪ್ಪಿನ ಅರಿವಾಗಿ ತಲೆ ಮೇಲೆ ಕೈ ಹೊತ್ತು ಕೂರುವಂತಾಯಿತು. ಆ ಅಂಗಡಿಯವರು ಮುಂದೆ ರಾತ್ರಿ 9ಕ್ಕೆ ಒಂದು ಖಾಸಗಿ ಬಸ್ಸು ಶಿರಸಿ ಹೋಗುವುದಾಗಿ ಹೇಳಿದರು. ಅಲ್ಲಿಯವರೆಗೆ ಕಾದರೆ ಹಾಸ್ಟೆಲ್ ಸಮಯ ಮೀರಿ ವಾರ್ಡನ್ ಕಡೆ ಬಯ್ಸಿಕೊಳ್ಳಬೇಕಾಗಿ ಬರುವುದು ಎಂದು ಯೋಚಿಸಿ, ನಿಲ್ದಾಣದಿಂದ ಹೊರ ಬಂದು, ಯಾವುದಾದರೂ ಶೇರ್ ಆಟೊ ಅಥವಾ ಶಿರಸಿ ಕಡೆ ಹೋಗೊ ಕಾರುಗಳು ಸಿಗಬಹುದೆನೋ ನೋಡ ಹೊರಟೆವು! ಏನು ಉಪಯೋಗವಾಗಲಿಲ್ಲ. ಮತ್ತೆ ನಮ್ಮ ಸಹಪಾಠಿಗಳಿಗೆ ಯಾರಿಗಾದರೂ ಕರೆ ಮಾಡಿ ಕರೆದುಕೊಂಡು ಹೋಗಲು ಕರೆಯೋಣವೆಂದರೆ ನಾವು ನಾಲ್ಕು ಜನರಿದ್ದೆವು, ಅವರಿಗೂ ಕರೆದುಕೊಂಡು ಹೋಗಲು ಕಷ್ಟವಾಗುತ್ತದೆ ಎಂದು ಸುಮ್ಮನಾದೆವು.

ಮುಂದೆ ಏನು ಮೂಡುವುದೊ ತಿಳಿಯದೆ ಮರಳಿ ನಿಲ್ದಾಣಕ್ಕೆ ಹೋಗಿ ಪೇಚು ಹಾಕಿ ಕುಳಿತೆವು. ಹಾಗೇ ಕಾಯುತ್ತಾ ಸಮಯ 8 ಸಮೀಪಿಸಿತು, ನಿಲ್ದಾಣದಲ್ಲಿ ಬೇರೆ ಯಾರು ಇಲ್ಲದೆ ನಾವೇ ನಾಲ್ಕು ಜನ ಹುಡುಗೀರು, ಏನೋ ವ್ಯವಸ್ಥೆ ಅಗುತ್ತದೆ ನಾವು ಹಾಸ್ಟೆಲ್ ಸೇರುತ್ತೇವೆ ಎಂಬ ಧೈರ್ಯವಿದ್ದರೂ ಮನದ ಮೂಲೆಯಲ್ಲೆಲ್ಲೋ ಸಣ್ಣ ಭಯ.

ಹಾಗೆ ಶುರುವಿನಲ್ಲಿ ನಿಮಗೆ ನಾನು ಅಲ್ಲಿಗೆ ಹೋದ ಬಸ್ ನಂಬರ್ ಕೂಡ ನೆನಪ್ಪಿಟ್ಟಿದ್ದು ಸೊಜಿಗವೆನಸಲಿಲ್ಲವೇ!? ಹಾ ಅದು ಯಾಕೆಂದು ಈಗ ಹೇಳುತೇನೆ ಕೇಳಿ!😄 ನಾವು ಅಲೇ ಕಾಯುತ್ತಿದ್ದಾಗ ಸುಮಾರು 8:20ಕ್ಕೆ  ನಾವು ಬನವಾಸಿಗೆ ಬಂದ ಅದೇ ಬಸ್ಸು  ಶಿರಸಿಯಿಂದ ಬಂತು. ಎಲ್ಲಾ ದಿನವು ಅಲ್ಲೇ ಹಾಲ್ಟಾಗುವ ಬಸ್ಸಿಗೆ ಅಂದೇ ಏಕೋ ಪ್ರಯಾಣಿಕರನ್ನು ಇಳಿಸಿ ಮರಳಿ ಶಿರಸಿ ಬರಲು ಆದೇಶಿಸಿದ್ದರಂತೆ ಅದು ನಮ್ಮ ಅದೃಷ್ಟವೇ ಸರಿ… ತಪ್ಪು ಮಾಹಿತಿ ನೀಡಿದ್ದ ನಿರ್ವಾಹಕರು ನಮ್ಮನ್ನು ಕರೆದು ಬಸ್ ಹತ್ತಲು ಹೇಳಿದರು…. ಬಸ್ಸಿನಲ್ಲಿ ನಾವಲ್ಲದೇ ಬೇರೆ ಯಾವ ಪ್ರಯಾಣಿಕರು ಇಲ್ಲ.

ಚಾಲಕರು, ನಿರ್ವಾಹಕರು, ನಮಗೆ ಇನ್ನು ಮುಂದೆ ಕತ್ತಲಾಗುವದರೊಳಗೆ ಹಾಸ್ಟೆಲ್ ಸೇರುವಂತೆ ಬಯ್ದರು, ಶಿರಸಿಗೆ ಬರುವಷ್ಟರಲ್ಲಿ 8:30ರ ಸಮಯ, ಕರೆದು ತಂದವರಿಗೆ ಧನ್ಯವಾದ ತಿಳಿಸಲು ಮರೆಯದೆ, ಹಾಸ್ಟೆಲ್ ಕಡೆ ನಡೆದೆವು. ವಾಚ್ ಮೆನ್ ಏಕೆ ತಡವೆಂದು ಕೇಳಲು, ಸಿದ್ಧವಾದಂತಿತ್ತು, ಕೇಳಿದರು ಸಹ, ನಂತರ ವಾರ್ಡನ್ ಬಳಿ ತಡವಾಗಿದಕ್ಕೆ ಬಯ್ಗುಳ ತಿಂದು, ಇನ್ಮುಂದೆ ಹೀಗಾವುದಿಲ್ಲವೆಂದು ತಿಳಿಸಿ ಒಳನಡೆದೆವು.  ಏನೆಂದರೂ ಈ ಲೇಟ್ ಲತೀಫ್ KA 31 F 1383 ನೆನಪಿನ ಪುಟಗಳಲಿ ಚಿರವಾಯಿತು!

ಇಂದಿಗೆ ನಮ್ಮ ಈ ನೆನಪಿಗೆ ಎರಡು ವರ್ಷ!

ಇನ್ನೂ ಹೆಚ್ಚು ಸಾಹಸಗಾತೆಗಳ ಹೊತ್ತು ತರುವ ಹಂಬಲವಿದೆ. ನಿರೀಕ್ಷಿಸಿ!🙂

ಇಂತಿ ನಿಮ್ಮವಳು, ವಿಸ್ಮಯ.

11 thoughts on “ಬನವಾಸಿಯಲ್ಲಿ ಪೇಚಾಟ!

Leave a reply to Saniya Cancel reply

Design a site like this with WordPress.com
Get started