ದುರ್ಗದ ದೈತ್ಯ ದಂತಕಥೆ – ೮
ಈ ಸರಣಿಯ ಕೊನೆಯ ಪುಸ್ತಕ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕೃತಿ-

ತ ರಾ ಸು ಅವರಿಗೆ ೬೫೦+ ಪುಟಗಳಷ್ಟು ಸಮೃದ್ಧವಾದ ಶ್ರೀಮಂತ ಕಾದಂಬರಿಯ ಹೆಣೆಯುವಿಕೆ, ಓದುಗನನ್ನು ಇಂಚಿಂಚಿಗೂ ತಲುಪುವ ಸೃಜನಶೀಲತೆ ದೈವದತ್ತವಾಗಿ ಒಲಿದ ಕಲೆ. ದುರ್ಗದ ಹಿರಿಮೆ, ಉನ್ನತಿ, ಅವನತಿಯವರೆಗೂ ಎಳೆಎಳೆಯಾಗಿ ಬಿಚ್ಚಿಟ್ಟಿದರೆ.
ಇಲ್ಲಿ ಹಿಂದಿನ ಪುಸ್ತಕಗಳ ಆರಂಭದಂತೆ ಅರಸನ ಆಯ್ಕೆಯಿಂದಲೇ ಮೊದಲ್ಗೊಂಡಿದೆ. ಕಸ್ತೂರಿನಾಯಕ ಸಂತಾನಹೀನರಾಗಿ ಮರಣ ಹೊಂದಿದ ನಂತರ ಅವರ ತಾಯಿ ಓಬವ್ವನಾಗತಿಯು ಹಾಗೂ ಆಡಳಿತವು ಸೇರಿ ದುರ್ಗದ ಸಂಬಂಧಿಕರ ಮಗನಾದ ಮದಕರಿಯನ್ನು ಹೊಸ ಅರಸನ್ನಾಗಿ ಮಾಡಲು ನಿಶ್ಚಯಸುತ್ತಾರೆ. ಜನಕಲ್ಲು ದುರ್ಗದ 12 ವರ್ಷದ ಎಳೆಯನ ಪಟ್ಟಾಭಿಷೇಕದಿಂದ ಶುರುವಾಗುವುದು ದುರ್ಗಾಸ್ತಮಾನ.
ಓಬವ್ವ ನಾಗತಿಯ ಜವಾಬ್ದಾರಿ,
ದುರ್ಗಕ್ಕಿಂತ ದೊಡ್ಡವರು ಯಾರು ಇಲ್ಲ ಎಂದು ಮಗನನ್ನು ದೂರ ಮಾಡಿಕೊಂಡ ಪ್ರಧಾನಿ ಕಳ್ಳಿ ನರಸಪ್ಪ ನಾಯಕರು,
ಜಿದ್ದಿನ ಬುದ್ಧಿಯ ನವಾಬ ಹೈದರಾಲಿ, ಅತ್ತಿತ್ತಾ ಹೊಯ್ದಾಡುವ ಮರಾಠರ ಸೈನ್ಯ,
ಶತ್ರು ಸೈನ್ಯ ದೊಳಗೆ ಒಬ್ಬನೇ ನುಗ್ಗಿ ಆ ಗುಂಪಿನ ನಾಯಕನ ರುಂಡ ಕಡಿದು ತಂದ ವೀರಯೋಧ ಗುದಗತ್ತಿ.
ದುರ್ಗವನ್ನು ಕಾಪಾಡಿದ ರಣದುರ್ಗಿ ಓಬವ್ವ. ಸೇಡು ತೀರಿಸಿಕೊಳ್ಳುಲೆ ಇರುವ ಮದಕರಿಯ ಖಾಸಾ ಬೇಡ ಪಡೆ,
ಕಡೂರಿ ಹಾಗೂ ನಗವ್ವನ ವ್ಯಮೋಹ,
ಒಂದು ವರ್ಷ ಸತತ ಸಮರದ ಸಮಯದಲ್ಲಿ ಸಾವಿನ ಗುಹೆಯಾದ ದುರ್ಗ,
ಪಂಜಾ ತೊಳೆಯಲು ಹೋಗಿ ನವಾಬನ ಪಿತೂರಿಗೂಳಗಾದ ಮುಸ್ಲಿಂ ಸರ್ದಾರರು, ರಾಜಸಹೇಬರನ್ನೇ ಖುದಾ ಎಂದು ನಮಾಜ್ ಮಾಡಿದ ಸರ್ದಾರ್ ಖಾನ,
ಹಿಂದೂ-ಮುಸ್ಲಿಂ ಏಕ್ ಹೈ ಹೈದರ್ ಸಪ್ಕೋ ದುಷ್ಮನ್ ಹೈ ಎಂದು ಕೂಗುವ ದುರ್ಗದ ಜನತೆ,
ಹೊರಗಿನಿಂದ ಯುದ್ಧ ಮಾಡಿ ಗೆಲ್ಲಲು ಹೆಣಗುತ್ತಿದ್ದ ಹೈದರಾಲಿಗೆ ಒಳಗಿನಿಂದ ಕೋಟೆಯನ್ನು ಗೆಲ್ಲಿಸಿಕೊಟ್ಟ ದಿವಾನ ಪೂರ್ಣಯ್ಯ ಮತ್ತು ಬೇಹುಗಾರ ಅಬ್ದುಲ್ ಖಯಂ,
ಮಾದಕರಿಯ ಅಳಿವುವಾಗುವುದೆಂದು ಖಚಿತವಾದೊಡೆ ಅಕ್ಕತಂಗಿ ಹೊಂಡಕ್ಕೆ ಆಹುತಿಯಾದ ಮುತೈದೆಯರು ಬಂಗಾರವ್ವ ಹಾಗೂ ಪದ್ಮವ್ವ.
ನಾಯಕನ ಕೊನೆವರೆಗೂ ಕೈಬಿಡದೆ ಜೊತೆಗಿದ್ದ ತಮ್ಮ ಪರಶುರಾಮಪ್ಪ,
ತುಂಬಿದ ದುರ್ಗದಲ್ಲಿ ಕಡೆಗೂ ಒಂಟಿಯಾದ ಮದಕರಿ ಎಲ್ಲವೂ ಇನ್ನೂ ಕಣ್ಣಿಗೆ ಕಟ್ಟುವಂತಿದೆ.
ರಾಜನಾದವನ ಮಾನಸಿಕ ಸ್ಥಿತಿ, ವೈಯಕ್ತಿಕ ಹಾಗು ಅವೈಯಕ್ತಿಕ ವಿಷಯಗಳನ್ನು ತರಾಸುರವರು ಸನ್ನಿವೇಶ ಸಹಿತವಾಗಿ ವಿವರಿಸಿದ್ದಾರೆ.
ಇದೊಂದು ಸಾರ್ಥಕ ಓದಿನ ನಂತರ ಚಿತ್ರದುರ್ಗವೆಂದರೇ ಕೇವಲ ಕಲ್ಲಿನ ಕೋಟೆಯಲ್ಲ. ಅಲ್ಲಿ ಎಷ್ಟೋ ರಾಶಿ ರಾಶಿ ಕಥೆಗಳಿವೆ, ತ್ಯಾಗ ಬಲಿದಾನಗಳಿವೆ. ಪುಸ್ತಕದ ಕೊನೆಗೆ ಅದೊಂದು ಐತಿಹಾಸಿಕ ಪಾತ್ರ ವೀರ ಮದಕರಿಯ ಪರಕಾಯ ಪ್ರವೇಶವಾಗುತ್ತದೆ, ಅವನ ಒಂದೊಂದು ಏಟನ್ನು, ಬಿದ್ದ ಹನಿ ಹನಿ ರಕ್ತವನ್ನು, ಅಸಹಾಯಕತೆ, ಪ್ರೀತಿ, ಅಂತಃಕರಣಗಳನ್ನು ಓದುಗ ಅನುಭವಿಸಬಹುದು.”ಉತ್ಸವಾಂಬೆಗೆ ಜಯವಾಗಲಿ” ಎಂಬ ಘೋಷ ಕೇಳಿಬರುತ್ತದೆ.
ಇದು ನಮ್ಮ ಹೆಮ್ಮೆಯ ದುರ್ಗದ ದಂತಕಥೆ.. ಪ್ರಣಾಮಗಳು.
#durgastamana #swarganamdurga #fortcitychitradurga #histroyinspires
#tarasu #knowyournative
#ka_16 #prouddurgans











































































