ದುರ್ಗಾಸ್ತಮಾನ

ದುರ್ಗದ  ದೈತ್ಯ ದಂತಕಥೆ – ೮ ಈ ಸರಣಿಯ ಕೊನೆಯ ಪುಸ್ತಕ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕೃತಿ- ತ ರಾ ಸು ಅವರಿಗೆ ೬೫೦+ ಪುಟಗಳಷ್ಟು ಸಮೃದ್ಧವಾದ ಶ್ರೀಮಂತ  ಕಾದಂಬರಿಯ ಹೆಣೆಯುವಿಕೆ, ಓದುಗನನ್ನು ಇಂಚಿಂಚಿಗೂ ತಲುಪುವ ಸೃಜನಶೀಲತೆ  ದೈವದತ್ತವಾಗಿ ಒಲಿದ ಕಲೆ. ದುರ್ಗದ  ಹಿರಿಮೆ, ಉನ್ನತಿ, ಅವನತಿಯವರೆಗೂ  ಎಳೆಎಳೆಯಾಗಿ ಬಿಚ್ಚಿಟ್ಟಿದರೆ. ಇಲ್ಲಿ ಹಿಂದಿನ ಪುಸ್ತಕಗಳ ಆರಂಭದಂತೆ ಅರಸನ ಆಯ್ಕೆಯಿಂದಲೇ ಮೊದಲ್ಗೊಂಡಿದೆ. ಕಸ್ತೂರಿನಾಯಕ ಸಂತಾನಹೀನರಾಗಿ ಮರಣ ಹೊಂದಿದ ನಂತರ ಅವರ ತಾಯಿ ಓಬವ್ವನಾಗತಿಯು ಹಾಗೂ ಆಡಳಿತವು ಸೇರಿ Continue reading “ದುರ್ಗಾಸ್ತಮಾನ”

ಕಸ್ತೂರಿ ಕಂಕಣ

ದುರ್ಗದ ದಂತಕಥೆ – ೭/೮ ಕೊಲೆ, ಅಕಾಲಿಕ ಮರಣ ಅಥವಾ ರಾಜಕೀಯ ಅತಂತ್ರ ಪರಿಸ್ಥಿತಿಗಳನ್ನು ಬಿಟ್ಟು ಹೊಸದೊಂದು ವಿಷಯದ ಮೂಲಕ ಲೇಖಕರು ಓದುಗರಿಗೆ ಹೊಸತನವನ್ನು ನೀಡಿದ್ದಾರೆ. ಸೀರ್ಯದ ನಾಯಕರು ದುರ್ಗದ ನಾಯಕರ ಮಗಳನ್ನು ತಮ್ಮ ಸೊಸೆಯನ್ನಾಗಿ ಮಾಡಿಕೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿ ಕಳಿಸುವ ರಾಜಸದೊಂದಿಗೆ ಶುರುವಾಗುವ ಕಥೆ ಸರ್ಜೇ ನಾಯಕರ ರೌದ್ರಾವತಾರದೊಂದಿಗೆ ಕೊನೆಗೊಳ್ಳುತ್ತದೆ.ವಿವಾಹ ! ಎರಡು ಕುಟುಂಬಗಳನ್ನು, ಹಲವು ಮನಸುಗಳನ್ನು ಬೆಸೆಯುವ ಕಾರ್ಯ.  ರಾಜ ಮನೆತನಗಳ ವಿವಾಹ ಗಳೆಂದರೆ ಸ್ವಪ್ರತಿಷ್ಠೆ, ಒಳಸಂಚಿನ ರಾಜಕಾರಣಕ್ಕಾಗಿ ಕೆಲ ಸಂಬಂಧಗಳು ಹುಡುಕಿಕೊಂಡು ಬರುತ್ತವೆ.Continue reading “ಕಸ್ತೂರಿ ಕಂಕಣ”

ರಾಜ್ಯ ದಾಹ

ದುರ್ಗದ ದಂತಕಥೆ – ೬/೮ ವಿಜಯೋತ್ಸವದ ಮೆಹೆರ್‌ಬಾನುವಿನಂತ ಒಂದು ಮಾಂತ್ರಿಕ ಪಾತ್ರದ ಬಗ್ಗೆ ಓದಲು ಈ ಪುಸ್ತಕ ಶುರುಮಾಡಿದಾಗ ಒಂದು ಅಚ್ಚರಿ ಕಾದ್ದಿತ್ತು. ದುರ್ಗದ ಸರಣಿಯ ಆರನೇ ಪುಸ್ತಕವಿದು. ಕಂಬನಿಯ ಕುಯಿಲು, ರಕ್ತರಾತ್ರಿ, ತಿರುಗುಬಾಣ, ಹೊಸಹಗಲು ಮತ್ತು ವಿಜಯೋತ್ಸವ ಕಾದಂಬರಿಗಳೆಲ್ಲವೂ ಒಂದು ಮಾರ್ಗದಲ್ಲಿ ಚಲಿಸಿದರೆ. ರಾಜ್ಯದಾಹ ಭರಮಣ್ಣ ನಾಯಕನ ರಾಜ್ಯಾಡಳಿತದಲ್ಲಿ ಬರುವ ಆಂತರಿಕ ಕಲಹದ ಕುರಿತು ಇರಬಹುದು ಎಂದುಕೊಂಡು ಪುಸ್ತಕವನ್ನು ತೆರೆದಾಗ ತ.ರಾ.ಸು ಈಗಿನ ಸಿನಿಮಾ ಸಿಕ್ವೆಲ್ ಸಿನ್ಗಳಂತೆ ಕಂಬನಿಯ ಕುಯಿಲು ಮತ್ತು ರಕ್ತರಾತ್ರಿ ಪುಸ್ತಕಗಳ ನಡುವೆContinue reading “ರಾಜ್ಯ ದಾಹ”

ವಿಜಯೋತ್ಸವ

ದುರ್ಗದ ದಂತಕಥೆ – ೫/೮ ಹೊಸ ಹಗಲು ಮುಗಿಸಿದ ನಂತರದ ಮುರುಘಾ ರಾಜೇಂದ್ರಸ್ವಾಮಿಗಳು ಹೇಳುವ ಕಾಲಜ್ಞಾನದ ನುಡಿಗಳು ರಾಜ ಭರಮಣ್ಣ ನಾಯಕರನ್ನು ಅಣಜಿಯ ಯುದ್ಧದ ಫಲಿತಾಂಶಕ್ಕಿಂತ ಹೆಚ್ಚು ಚಿಂತೆಗೀಡು ಮಾಡುತ್ತದೆ.ಯುದ್ಧ ಇನ್ಮುಂದೆ ಬೇಡವೆಂದು ಯೋಚನೆಯಲ್ಲಿರುವಾಗಲೇ ದೆಹಲಿಯ ದಿವಾನ್ ಖಾಸಿಂ ಖಾನ್‌ನ ವಕೀಲ ಜುಲ್ಫಿಕರ್ ಖಾನ್  ಸಿರಿಯಾದಿಂದ(ಇಂದಿನ ಸಿರಾ) ತರುವ ರಾಜಸದಲ್ಲಿ  ದುರ್ಗದವರು ಇನ್ಮುಂದೆ ಕಪ್ಪಕಾಣಿಕೆಯನ್ನು ಒಪ್ಪಿಸಿ, ಸ್ನೇಹವಾಗಿರಬೇಕೆಂದು ಸೂಚಿಸಿರುತ್ತದೆ. ಪ್ರಧಾನಿ ಮತ್ತು ನಾಯಕರ ನಿರ್ಧಾರ ದುರ್ಗವನ್ನು ಶ್ರೀಮಂತವಾಗಿಸುವುದೋ, ಸಾಮಂತವಾಗಿಸುವುದೋ ಎಂಬುದನ್ನು ತಿಳಿಯಲು ಪುಸ್ತಕ ಓದಬೇಕು.ಇಲ್ಲಿಂದ ಆರಂಭವಾಗುವ ಕಥನವೂContinue reading “ವಿಜಯೋತ್ಸವ”

ಹೊಸ ಹಗಲು

ದುರ್ಗದ ದಂತಕಥೆ- ೪/೮ ಕತ್ತಲು ಶಾಶ್ವತವಲ್ಲ. ಇರುಳು ಮುಗಿದಮೇಲೆ “ಹೊಸಹಗಲು” ಮೂಡಲೇಬೇಕು.ಮುದ್ದಣ್ಣನ ಸಂಪುಟ ಮುಗಿದ ಮೇಲಿನ ದುರ್ಗದ ಕಥೆ ಇಲ್ಲಿ ಮುಂದುವರಿದಿದೆ.ಸಹಜವಾಗಿ ಎಲ್ಲಾ ಐತಿಹಾಸಿಕ ಕಥೆಗಳು ಹೀಗೆ ಇರುತ್ತವೆ ಕುಸಿದು ಮತ್ತೆ ಹುಟ್ಟುತ್ತವೆ, ಆ ಒಬ್ಬ ನಾಯಕನಿಂದ. ಅಂಥ ಒಬ್ಬ ಕುರುಬ ನಾಯಕನಾಗುವ  ಕನಸುಗಳಿಂದ ಶುರುವಾಗುವುದು ಹೊಸಹಗಲು, ಈ ಹಿಂದಿನ ಮೂರು ಪುಸ್ತಕಗಳಲ್ಲೂ ಬರುವ ನಾಯಕರ ಆಯ್ಕೆ ಪ್ರಕ್ರಿಯೆ ಇಲ್ಲೂ ಮುಂದುವರೆದಿದೆ. ಮತ್ತಿವಂಶದ ಕಡೆಯ ಗಂಡು ಸಂತಾನವಾದ ರಂಗಪ್ಪನಾಯಕ ಬಂಧಿಯಾದ ಮೇಲೆ ಪುನಃ ಅವರನ್ನೇ ಪಟ್ಟಕ್ಕೆ ಕೂರಿಸಿದರೇContinue reading “ಹೊಸ ಹಗಲು”

ತಿರುಗು ಬಾಣ

ದುರ್ಗದ ದಂತಕಥೆ-೩/೮ “ದುರ್ಗದ ಸರ್ವಾಧಿಕಾರಿ ಮುದ್ದಣ್ಣ” ಕೇಳಿದರೆ ರೋಷ ಉಕ್ಕುತದೆ. ನೊಂದ ಹೆಣ್ಣು ಗಿರಿಜವ್ವೆ, ಅನಾಥ ಪುತ್ರರು, ದಿಕ್ಕಿಲ್ಲದ ಹಳ್ಳಿಗರು, ರೋಸತ್ತ ಸೈನಿಕರು ಒಂದಾಗಿ ಹೆಣೆದ ಮಹಾ ಸಂಚಿಗೆ, ಬಲಿಪಶುಗಳಾದ ರಾಜದ್ರೋಹಿ, ಅಧರ್ಮಿ, ರಕ್ತಪಿಪಾಸು, ಮುದ್ದಣ್ಣ ಮತ್ತು ಸಂಗಡಿಗರ ರೋಚಕ ಕಹಾನಿ,’ತಿರುಗುಬಾಣ’. ಪಂಜು ಉರಿದಷ್ಟು ಹಿಡಿಕೆ ಸುಡುತ್ತದೆ. ದುರ್ಗದ ಜನತೆ ಗಿರಿಜವ್ವಯ ಕ್ರೋಧಕ್ಕೆ, ಮತ್ತಿವಂಶದವರ ಮೇಲೆ ನಡೆದ ದೌರ್ಜನ್ಯಕ್ಕೆ, ಸಾಮಾನ್ಯರ ಮೇಲಿನ ಶೋಷಣೆಗೆ ಹೇಗೆ ಸ್ಪಂದಿಸುತ್ತದೆ ಎಂಬುದು ಕಥೆಯ ಒಂದು ಭಾಗವಾದರೇ,ಪರಶುರಾಮಪ್ಪ ಮತ್ತು ಭರಮಣ್ಣ ಅವರ ರಾಜತಾಂತ್ರಿಕತೆಯೇContinue reading “ತಿರುಗು ಬಾಣ”

ರಕ್ತ ರಾತ್ರಿ

ದುರ್ಗದ ದಂತಕಥೆ-೨/೮ ಹೊಸದಾಗಿ ಪಟ್ಟಾಭಿಷೇಕಗೊಂಡ ಓಬಣ್ಣ ನಾಯಕನ ಕೊಲೆಯೊಂದಿಗೆ ಕಂಬನಿಯ ಕುಯಿಲು ಕೊನೆಗೊಂಡಿತು. ಆ ಹತ್ಯೆಯ ನಂತರ  12 ವರ್ಷಗಳ ಕಾಲ ಆಳಿದ ಚಿಕ್ಕಣ್ಣ ನಾಯಕನ ಸಾವಿನ ನಂತರವು ಓಬಣ್ಣನ ಪರವಾಗಿ ಗದ್ದುಗೆಯ ಹಕ್ಕನ್ನು ಬಿಟ್ಟುಕೊಟ್ಟಿದ್ದ ಲಿಂಗಣ್ಣ  ತಾನು ರಕ್ಷಿಸುವುದಾಗಿ ಪ್ರಮಾಣ ಮಾಡಿದ ಓಬಣ್ಣ ಹಾಗೂ ಆತ್ಮಹತ್ಯೆ ಮಾಡಿಕೊಂಡ ಓಬವ್ವ ನಾಗತಿಯನ್ನು ರಕ್ಷಿಸಲಾಗದ ಪಾಪಪ್ರಜ್ಞೆಯಲ್ಲಿ ದಿನನಿತ್ಯ ಬದುಕುತ್ತಿದ್ದ ಸನ್ನಿವೇಶದಿಂದರಕ್ತ ರಾತ್ರಿಯು ಎತ್ತಿಕೊಳ್ಳುತ್ತದೆ.ಈ 12 ವರ್ಷಗಳಲ್ಲಿ, ಮೊದಲ ಪುಸ್ತಕದ ಪಿತೂರಿಗಳ ಹಿಂದೆ ಇದ್ದ ದಳವಾಯಿ ಮುದ್ದಣ್ಣ ಹಾಗೂ ತನ್ನContinue reading “ರಕ್ತ ರಾತ್ರಿ”

ಕಂಬನಿಯ ಕುಯಿಲು

ಇದು ಮತ್ತಿ ವಂಶದ ತಿಮ್ಮಣ ನಾಯಕರು ಸ್ಥಾಪಿಸಿದ ಐತಿಹಾಸಿಕ ದುರ್ಗದ ದಂತಕಥೆ- ೧/೮ ತ ರಾ ಸು ಅವರ ವಿಶಿಷ್ಟ ಬರವಣಿಗೆಯ ಶೈಲಿಯಲ್ಲಿ ದುರ್ಗವನ್ನು ಕಣ್ಣಮುಂದಿರಿಸಿ, ಪಾತ್ರಗಳಿಗೆ ಜೀವ ತುಂಬಿ,ಕಣ್ಣಿಗೆ ಕಟ್ಟುವ ಹಾಗೆ, ಮನಕ್ಕೆ ಮುಟ್ಟುವ ಹಾಗೆ ವಿವರಿಸಿದ್ದಾರೆ. ದುರ್ಗದ ಇತಿಹಾಸವನ್ನು ಕಾದಂಬರಿ ರೂಪದಲ್ಲಿ ಇಷ್ಟು ಸೊಗಸಾಗಿ ದಾಖಲಿಸಲು ಯಾರಿಂದಲೂ ಸಾದ್ಯವಿಲ್ಲ. ಕಸ್ತೂರಿರಂಗಪ್ಪನಾಯಕನ ಕೊನೆಯ ಮಗ ಮದಕರಿ ನಾಯಕ ಸಂತಾನ ಹೀನನಾಗಿ ಮರಣ ಹೊಂದಿದ ನಂತರ ದುರ್ಗದ ಮುಂದಿನ ದೊರೆ ಯಾರು  ಎಂಬುದರ  ಬಗ್ಗೆ ಇಡಿ ಕಾದಂಬರಿContinue reading “ಕಂಬನಿಯ ಕುಯಿಲು”

ದುರ್ಗದ ದಂತಕಥೆಗಳು

ನಮ್ಮೂರು ಚಿತ್ರದುರ್ಗ, ಏಳು ಸುತ್ತಿನ ಕೋಟೆಗೆ ಪ್ರಸಿದ್ಧಿಯಾಗಿದೆ, ಅದನ್ನು ಮದಕರಿ ನಾಯಕ ಆಳ್ವಿಕೆ ಮಾಡುತ್ತಿರುವಾಗ ಹೈದರಾಲಿ ಕೋಟೆಗೆ ಮುತ್ತಿಗೆ ಹಾಕಿ ವಶಪಡಿಸಿಕೊಂಡ. ಹೀಗೆ ಸಣ್ಣವರಿದ್ದಾಗಿನಿಂದಲೂ ನಮಗೆ ಕೋಟೆ ನೋಡಲು ಹೋದಾಗ ಎಲ್ಲರೂ ಹೇಳುತ್ತಿದ್ದರು. ಇಷ್ಟು ಮಾತ್ರ ಗೊತ್ತಿದ್ದ ನನಗೆ ಒಮ್ಮೆ ತಾತನ  ಮನೆಯಲ್ಲಿ ತ. ರಾ. ಸು ಅವರು ಬರೆದ ಪುಸ್ತಕಗಳು ಕಣ್ಣಿಗೆ ಬಿತ್ತು, ಕುತೂಹಲ ಕೆದರಿ ಶೋಧಿಸಿದಾಗ ದುರ್ಗದ ಇತಿಹಾಸ ಸಾರುವ ಸಾಲು ಸರಣಿ ಪುಸ್ತಕಗಳು ಗರಿ ಬಿಚ್ಚಿದವು. ಅವುಗಳನ್ನು ಹುಡುಕಿ ಓದುವಾಗಲೇ ತಿಳಿದದ್ದು ದುರ್ಗದContinue reading “ದುರ್ಗದ ದಂತಕಥೆಗಳು”

ಬನವಾಸಿಯಲ್ಲಿ ಪೇಚಾಟ!

ಎಲ್ಲರಿಗೂ ನಮಸ್ಕಾರ!🙏 ನಾನು ಅರಣ್ಯ ಮಹಾವಿದ್ಯಾಲಯ, ಶಿರಸಿಯಲ್ಲಿ ೩ನೇ ವರ್ಷದ ಅರಣ್ಯಶಾಸ್ತ್ರ ವಿದ್ಯಾರ್ಥಿನಿ! ನಾನು ೨ನೇ ವಷ೯ದಲ್ಲಿದ್ದಾಗ ಒಂದು ರಜೆಯ ದಿನ, ವಾರ ಪೂರ್ತಿ ನೆಡದ ತರಗತಿಗಳ ಬೇಸರ ಕಳಿಯಲು ನಾಲ್ಕು ಜನ ಗೆಳತಿಯರು ಕೂಡಿ ಅಲ್ಲೆ 25 ಕಿ.ಮೀ ದೂರದಲ್ಲಿರುವ ಬನವಾಸಿಯ ಮಧುಕೇಶನ ದರ್ಶನಕ್ಕೆ ಹೊರಟೆವು,  ನಾವು ಹೊರಟಾಗ ಸಮಯ ಮಧ್ಯಾಹ್ನ 3 ಗಂಟೆ ದಾಟ್ಟಿತ್ತು, ವಾಪಸ್ ನಮ್ಮ ವಿದ್ಯಾರ್ಥಿನಿಲಯ ಸೇರಲು ಕೊನೆ ಸಮಯ ಸಂಜೆ 7:30 ರ ವರೆಗೆ ಮಾತ್ರ. ಅಷ್ಟರೊಳಗೆ ಮರಳಿ ಬರುವುದಾಗಿContinue reading “ಬನವಾಸಿಯಲ್ಲಿ ಪೇಚಾಟ!”

Design a site like this with WordPress.com
Get started