ಹೊಸ ಹಗಲು

ದುರ್ಗದ ದಂತಕಥೆ- ೪/೮

ಉಯ್ಯಾಲೆ ಕಂಬ, ಚಿತ್ರದುರ್ಗ ಕೋಟೆ.

ಕತ್ತಲು ಶಾಶ್ವತವಲ್ಲ. ಇರುಳು ಮುಗಿದಮೇಲೆ “ಹೊಸಹಗಲು” ಮೂಡಲೇಬೇಕು.
ಮುದ್ದಣ್ಣನ ಸಂಪುಟ ಮುಗಿದ ಮೇಲಿನ ದುರ್ಗದ ಕಥೆ ಇಲ್ಲಿ ಮುಂದುವರಿದಿದೆ.
ಸಹಜವಾಗಿ ಎಲ್ಲಾ ಐತಿಹಾಸಿಕ ಕಥೆಗಳು ಹೀಗೆ ಇರುತ್ತವೆ ಕುಸಿದು ಮತ್ತೆ ಹುಟ್ಟುತ್ತವೆ, ಆ ಒಬ್ಬ ನಾಯಕನಿಂದ. ಅಂಥ ಒಬ್ಬ ಕುರುಬ ನಾಯಕನಾಗುವ  ಕನಸುಗಳಿಂದ ಶುರುವಾಗುವುದು ಹೊಸಹಗಲು,

ಈ ಹಿಂದಿನ ಮೂರು ಪುಸ್ತಕಗಳಲ್ಲೂ ಬರುವ ನಾಯಕರ ಆಯ್ಕೆ ಪ್ರಕ್ರಿಯೆ ಇಲ್ಲೂ ಮುಂದುವರೆದಿದೆ. ಮತ್ತಿವಂಶದ ಕಡೆಯ ಗಂಡು ಸಂತಾನವಾದ ರಂಗಪ್ಪನಾಯಕ ಬಂಧಿಯಾದ ಮೇಲೆ ಪುನಃ ಅವರನ್ನೇ ಪಟ್ಟಕ್ಕೆ ಕೂರಿಸಿದರೇ ಸಿಂಹಾಸನಕ್ಕೆ ಶೋಭೆ ಇರುವುದಿಲ್ಲ ಎಂದು ಅವರ ನೆಂಟರೇ ಆದ ಭರಮಪ್ಪನನ್ನು ನಾಯಕನಾಗಿ ಆರಿಸಲು ತೀರ್ಮಾನಿಸುತ್ತಾರೆ. ತರಾಸುರವರ ಕಲಾತ್ಮಕವಾಗಿ ಕಥೆ ಹೆಣೆದಿರುವ ಚಾತುರ್ಯ ಮುರುಘಾರಾಜೇಂದ್ರ ಸ್ವಾಮಿಗಳ ಆಗಮನವಾದಾಗ ತಿಳಿಯುತ್ತದೆ.

ಕುರುಬ ಭರಮಣ್ಣನು ಅವನ ಕನಸಿನಂತೆ ಪಾಳೆಯಗಾರ ಭರಮಪ್ಪನಾಯಕನಾದ ನಂತರ ರಂಗಪ್ಪನಾಯಕ ಕಹಿ ಮಾತಿಗೆ ಕುಗ್ಗುತ್ತಾನೆ. ಕುಗ್ಗುವುದು ಹಿಗ್ಗುವುದರ ಮೊದಲ ಸಂಕೇತವೆನ್ನುವಂತೆ ಭರಮಪ್ಪನಾಯಕ ರಾಜ್ಯದ ಅಭಿವೃದ್ಧಿಯ ರೂಪುರೇಷೆಗಳನ್ನು ಸಿದ್ಧಪಡಿಸಿ “ಹಾಲಿನಲ್ಲಿ ಕೈ ತೊಳೆಯುವ” ಸಮೃದ್ಧ ಸಾಮ್ರಾಜ್ಯವನ್ನು ಕಟ್ಟಲು ಎಲ್ಲ ರೀತಿಯ ಸಿದ್ಧತೆಗಳು ಶುರುವಾಗುತ್ತವೆ. ಜನರ ಆಶೀರ್ವಾದಗಳೂ ಕೂಡ ದೊರೆಯುತ್ತವೆ.

ಬೆಳೆಯುವ ಸಾಮ್ರಾಜ್ಯವನ್ನು ತುಳಿಯಲೊಂದು ವೈರಿಬಣವೂ ಇರಬೇಕಲ್ಲವೇ. ರಂಗಪ್ಪನಾಯಕನ ತವರಾದ ಹರಪನಹಳ್ಳಿಯ ಬಸವಂತನಾಯಕನು ದುರ್ಗದ ಮೇಲೆ ಕಣ್ಣಿಡುತ್ತಾನೆ. ದುರ್ಗದ ಅಭಿವೃದ್ಧಿಯಲ್ಲಿ ಬಂದ ಆರ್ಥಿಕ ತೊಡಕುಗಳನ್ನು ಉಪಯೋಗಿಸಿಕೊಳ್ಳಲು, ದುರ್ಗದವರನ್ನೇ ಬಳಸಿಕೊಂಡು ದುರ್ಗವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಾನೆ.

ಕೆಳದಿಯವರ ಬೆಂಬಲದಿಂದ ಅಣಜಿಯನ್ನು ವಶಪಡಿಸಿಕೊಳ್ಳುವುದು ಹರಪನಹಳ್ಳಿಯವರ ಮೊದಲ ಗೆಲುವು ಹಾಗೂ ಅದು ಭರಮಪ್ಪನಾಯಕನ ಮೊದಲ ಯುದ್ಧ ಮತ್ತು ಮೊದಲ ಸೋಲು. ಆ ಸೋಲಿನಿಂದ ಭರಮಪ್ಪನಾಯಕ ಕುಗ್ಗುತ್ತಾನೆ. ಅಭಿವೃದ್ಧಿ ಕುಂಠಿತವಾಗುತ್ತದೆ. ಅಲ್ಲಿಂದಾಚೆಗೆ ಕಾದಂಬರಿಯು ಇನ್ನೊಂದು ರೂಪವನ್ನೇ ಪಡೆದುಕೊಳ್ಳುತ್ತದೆ. ಈ ಪುಸ್ತಕವು ಕತ್ತಿ ಮಸೆಯುವುದಕ್ಕಿಂತ ಬದುಕಿನ ಸತ್ಯಗಳು, ಕನಸು, ಸ್ವಾಮಿನಿಷ್ಠೆ, ರಾಜ್ಯಾಡಳಿತ, ಅಭಿವೃದ್ಧಿಯ ಕುರಿತು ಮಾತನಾಡುತ್ತದೆ. ಅಣಜಿ  ಕೋಟೆಯನ್ನು ಮತ್ತೆ ವಶಪಡಿಸಿಕೊಂಡ ದುರ್ಗದ ಸಮರೊತ್ಸಹವನ್ನು ತರಾಸು ರವರು ವಿವರಿಸುವ ಬಗೆ ಮೈ ಜುಮ್ಮೆನಿಸುತ್ತದೆ.

ಮುಂದೆ ಭರಮಪ್ಪನಾಯಕನ ದುರ್ಗದ ವಿರುದ್ಧ ಬಸವಂತನಾಯಕನ ಯುದ್ಧ, ಆಂತರಿಕ ಬಿಕ್ಕಟ್ಟು ಮತ್ತು ಮುರುಘಾರಾಜೇಂದ್ರಸ್ವಾಮಿಗಳ ಭವಿಷ್ಯವಾಣಿ  ಇವುಗಳ ವಿಸ್ತಾರ “ವಿಜಯೋತ್ಸವ” ದಲ್ಲಿ ತಿಳಿಯೋಣ.

#swarganamdurga #fortcitychitradurga #raktharatri #histroyinspires
#tarasu #knowyournative
#ka_16 #prouddurgans

Leave a comment

Design a site like this with WordPress.com
Get started