ದುರ್ಗದ ದಂತಕಥೆ – ೫/೮

ಹೊಸ ಹಗಲು ಮುಗಿಸಿದ ನಂತರದ ಮುರುಘಾ ರಾಜೇಂದ್ರಸ್ವಾಮಿಗಳು ಹೇಳುವ ಕಾಲಜ್ಞಾನದ ನುಡಿಗಳು ರಾಜ ಭರಮಣ್ಣ ನಾಯಕರನ್ನು ಅಣಜಿಯ ಯುದ್ಧದ ಫಲಿತಾಂಶಕ್ಕಿಂತ ಹೆಚ್ಚು ಚಿಂತೆಗೀಡು ಮಾಡುತ್ತದೆ.
ಯುದ್ಧ ಇನ್ಮುಂದೆ ಬೇಡವೆಂದು ಯೋಚನೆಯಲ್ಲಿರುವಾಗಲೇ ದೆಹಲಿಯ ದಿವಾನ್ ಖಾಸಿಂ ಖಾನ್‌ನ ವಕೀಲ ಜುಲ್ಫಿಕರ್ ಖಾನ್ ಸಿರಿಯಾದಿಂದ(ಇಂದಿನ ಸಿರಾ) ತರುವ ರಾಜಸದಲ್ಲಿ ದುರ್ಗದವರು ಇನ್ಮುಂದೆ ಕಪ್ಪಕಾಣಿಕೆಯನ್ನು ಒಪ್ಪಿಸಿ, ಸ್ನೇಹವಾಗಿರಬೇಕೆಂದು ಸೂಚಿಸಿರುತ್ತದೆ. ಪ್ರಧಾನಿ ಮತ್ತು ನಾಯಕರ ನಿರ್ಧಾರ ದುರ್ಗವನ್ನು ಶ್ರೀಮಂತವಾಗಿಸುವುದೋ, ಸಾಮಂತವಾಗಿಸುವುದೋ ಎಂಬುದನ್ನು ತಿಳಿಯಲು ಪುಸ್ತಕ ಓದಬೇಕು.
ಇಲ್ಲಿಂದ ಆರಂಭವಾಗುವ ಕಥನವೂ ದೊಡ್ಡೇರಿಯ ಕಾಳಗದಲ್ಲಿ ಮರಾಠರನ್ನು ಮುಗಿಸುವುದರೊಂದಿಗೆ ಕೊನೆಯಾಗುತ್ತದೆ.
ನಾಯಕರ ಮನಸ್ಥಿತಿ ದುರ್ಬಲಗೊಳಿಸುವ ಉದ್ದೇಶದಿಂದ ಮೆಹರ್‌ಬಾನು ಎಂಬ ಮುಸ್ಲಿಂ ಗಾಯಕಿಗೆ ತನ್ನ ಪ್ರತಿಭೆಯನ್ನು ದುರ್ಗದ ನಾಯಕರಿಗೆ ಮೆಚ್ಚಿಸುವ ಗಾನಗೋಷ್ಠಿಗೆಂದು ಹೇಳಿ ಜುಲ್ಫಿಕರ್ ಖಾನ್ ನ ಜೊತೆ ಕಳುಹಿಸಿರುತ್ತರೆ.
ಮೆಹರ್‌ಬಾನುವಿನ ಅಂದದ ಬಗ್ಗೆ ಬರೆದಿರುವ ಸಾಲುಗಳು ಇದು ಯುದ್ಧದ ಕುರಿತಾದ ಪುಸ್ತಕವಾ ಎಂಬ ಪ್ರಶ್ನೆಗಳು ಮೂಡುತ್ತವೆ. ಆ ವರ್ಣನೆಗೆ ಮನಸೋಲದೆ ಯಾರು ಉಳಿಯುವುದಿಲ್ಲ, ಈ ಪುಸ್ತಕದ ಬಹುಮುಖ್ಯ ಪಾತ್ರ ಈಕೆಯದು.
ತ.ರಾ.ಸುರವರು ಬಾದಷಹ ಮತ್ತು ನಾಯಕರ ನಡುವಿನ ಮನಸ್ತಾಪವೆಂದ ಮೇಲೆ ಅಲ್ಲಿ ಬರುವ ಹಿಂದೂ ಮುಸ್ಲಿಂ ಗಲಭೆಗಳನ್ನು ಬೆಣ್ಣೆಯಿಂದ ಕೂದಲ ತೆಗೆದಷ್ಟೇ ಚಂದವಾಗಿ
ನಿರೂಪಿಸಿದ್ದಾರೆ.
ಯುದ್ಧ ನಾಯಕರು, ಬಾದಷಹರು, ಮರಾಠರು ಮತ್ತು ನಿಂಬಾಯ್ಕರರ ನಡುವೆ ನಡೆದರೂ ಇವರು ಯಾರು ವಿಜಯೋತ್ಸವ ಆಚರಿಸುವುದಿಲ್ಲ. ಇಲ್ಲಿ ಧರ್ಮ,ಸಹಿಷ್ಣುತೆ, ನಿಷ್ಕಲ್ಮಶ, ನಿಶ್ಚಲ, ಮಾನವತಾವಾದಗಳ ಗೆಲುವಾಗಿದೆ.
ಲೇಖಕರು ಕೇವಲ ಸಮರ ರಾಜಕೀಯದ ಕುರಿತು ಬರೆಯದೇ ಪ್ರೀತಿ, ಜಾತಿ, ಮನುಷ್ಯತ್ವಳ ಬಗ್ಗೆಯೂ ಬರೆದಿರುವ ಈ ಪುಸ್ತಕವು ಈ ಹಿಂದಿನ ನಾಲ್ಕು ಪುಸ್ತಕಗಳಿಗಿಂತ ಹೆಚ್ಚು ಅಭಿಮಾನ ಗಳಿಸಿಕೊಳ್ಳುತ್ತದೆ.
#swarganamdurga #fortcitychitradurga #vijayotsava #histroyinspires
#tarasu #knowyournative
#ka_16 #prouddurgans