ರಾಜ್ಯ ದಾಹ

ದುರ್ಗದ ದಂತಕಥೆ – ೬/೮

ಚಿತ್ರದುರ್ಗದ ಕೋಟೆ

ವಿಜಯೋತ್ಸವದ ಮೆಹೆರ್‌ಬಾನುವಿನಂತ ಒಂದು ಮಾಂತ್ರಿಕ ಪಾತ್ರದ ಬಗ್ಗೆ ಓದಲು ಈ ಪುಸ್ತಕ ಶುರುಮಾಡಿದಾಗ ಒಂದು ಅಚ್ಚರಿ ಕಾದ್ದಿತ್ತು.

ದುರ್ಗದ ಸರಣಿಯ ಆರನೇ ಪುಸ್ತಕವಿದು. ಕಂಬನಿಯ ಕುಯಿಲು, ರಕ್ತರಾತ್ರಿ, ತಿರುಗುಬಾಣ, ಹೊಸಹಗಲು ಮತ್ತು ವಿಜಯೋತ್ಸವ ಕಾದಂಬರಿಗಳೆಲ್ಲವೂ ಒಂದು ಮಾರ್ಗದಲ್ಲಿ ಚಲಿಸಿದರೆ. ರಾಜ್ಯದಾಹ ಭರಮಣ್ಣ ನಾಯಕನ ರಾಜ್ಯಾಡಳಿತದಲ್ಲಿ ಬರುವ ಆಂತರಿಕ ಕಲಹದ ಕುರಿತು ಇರಬಹುದು ಎಂದುಕೊಂಡು ಪುಸ್ತಕವನ್ನು ತೆರೆದಾಗ ತ.ರಾ.ಸು ಈಗಿನ ಸಿನಿಮಾ ಸಿಕ್ವೆಲ್ ಸಿನ್ಗಳಂತೆ ಕಂಬನಿಯ ಕುಯಿಲು ಮತ್ತು ರಕ್ತರಾತ್ರಿ ಪುಸ್ತಕಗಳ ನಡುವೆ ಒಂದು ಹೇಳಿರದ ಕಥೆಯನ್ನು ಇಲ್ಲಿ ನಿರೂಪಿಸಿದ್ದರು. ಪುಸ್ತಕದ ಆರಂಭ ಕಂಬನಿಯ ಕುಯಿಲಿನ ಅಂತ್ಯದಿಂದ ಶುರುವಾಗಿದೆ. ಮುದ್ದಣ್ಣ, ಗಿರಿಜೆ, ಕಸ್ತೂರಿ ನಾಯಕ, ವೀರನಾಯಕ, ದಳವಾಯಿ ದೇಸಣ್ಣ, ಭುವನಪ್ಪ ಮತ್ತು ಮುಂತಾದ ಪಾತ್ರಗಳು ಪುಸ್ತಕದಲ್ಲಿ ಮತ್ತೆ ಬರುವುದು ಮತ್ತೆ ಹಿಂದಿನ ಪುಸ್ತಕಗಳನ್ನು ಮೆಲುಕು ಹಾಕಿಸುವುದರಲ್ಲಿ ಸೋತಿಲ್ಲ. ಅದರಲ್ಲೂ ಗಿರಿಜೆಯ ಪಾತ್ರ ರಕ್ತರಾತ್ರಿ ಮತ್ತು ತಿರುಗುಬಾಣ ಕಾದಂಬರಿಯಲ್ಲಿ ಏಕೆ ಅಷ್ಟು ಉಗ್ರವಾಯಿತು ಎಂಬ ಪ್ರಶ್ನೆಗಳಿಗೂ ಉತ್ತರವಿದೆ.

ಮುದ್ದಣ್ಣನ ವರ್ತನೆಗೆ ಕೇವಲ ಅಧಿಕಾರದ ಆಸೆಬಾಕತನ ಒಂದೇ ಕಾರಣವಾಗಿರಲಿಲ್ಲ. ಬೇರೆ ಕಾರಣಗಳೂ ಇದ್ದವು. ಹೇಯಭಾವ ಮತ್ತಷ್ಟು ಹೆಚ್ಚಾಗಿ ಛೀ ಮುದ್ದಣ್ಣ ಎಂದು ಅನಿಸಲೂಬಹುದು. ರಕ್ತರಾತ್ರಿಯ ಆರಂಭದಲ್ಲೇ ಅಂತ್ಯವಾಗುವ ಚಿಕ್ಕಣ್ಣನಾಯಕನ ಆಳ್ವಿಕೆಯ ಬಗ್ಗೆ ಈ ಹಿಂದಿನ ಪುಸ್ತಕಗಳಲ್ಲಿರದ ವಿವರಣೆ ರಾಜ್ಯದಾಹದಲ್ಲಿದೆ.

ಕೇವಲ ೧೨೦ ಪುಟಗಳಿರುವ ಪುಸ್ತಕವು ಕಳೆದುಹೋಗಿದ್ದ ಕೊಂಡಿಯನ್ನು ಬೆಸೆದು ದುರ್ಗದ ಕಥೆಯನ್ನು ಇನ್ನಷ್ಟು ರೋಚಕವಾಗಿಸಿದೆ. ಹೇಳಲು ಹೆಚ್ಚು ಅವಕಾಶವನ್ನೂ ನೀಡದಷ್ಟು ಸೂಕ್ಷ್ಮವಾಗಿ ಕಥೆಯನ್ನು ಹೇಳಿದ್ದಾರೆ.

ಕಸ್ತೂರಿ ಕಂಕಣಕ್ಕೆ ಮತ್ತೆ ಸಿಗೋಣ.

#swarganamdurga #fortcitychitradurga #rajyadaha #histroyinspires
#tarasu #knowyournative
#ka_16 #prouddurgans

Leave a comment

Design a site like this with WordPress.com
Get started