ದುರ್ಗದ ದಂತಕಥೆಗಳು

ನಮ್ಮೂರು ಚಿತ್ರದುರ್ಗ, ಏಳು ಸುತ್ತಿನ ಕೋಟೆಗೆ ಪ್ರಸಿದ್ಧಿಯಾಗಿದೆ, ಅದನ್ನು ಮದಕರಿ ನಾಯಕ ಆಳ್ವಿಕೆ ಮಾಡುತ್ತಿರುವಾಗ ಹೈದರಾಲಿ ಕೋಟೆಗೆ ಮುತ್ತಿಗೆ ಹಾಕಿ ವಶಪಡಿಸಿಕೊಂಡ. ಹೀಗೆ ಸಣ್ಣವರಿದ್ದಾಗಿನಿಂದಲೂ ನಮಗೆ ಕೋಟೆ ನೋಡಲು ಹೋದಾಗ ಎಲ್ಲರೂ ಹೇಳುತ್ತಿದ್ದರು.

ಚಿತ್ರದುರ್ಗದ ಕೋಟೆ

ಇಷ್ಟು ಮಾತ್ರ ಗೊತ್ತಿದ್ದ ನನಗೆ ಒಮ್ಮೆ ತಾತನ  ಮನೆಯಲ್ಲಿ ತ. ರಾ. ಸು ಅವರು ಬರೆದ ಪುಸ್ತಕಗಳು ಕಣ್ಣಿಗೆ ಬಿತ್ತು, ಕುತೂಹಲ ಕೆದರಿ ಶೋಧಿಸಿದಾಗ ದುರ್ಗದ ಇತಿಹಾಸ ಸಾರುವ ಸಾಲು ಸರಣಿ ಪುಸ್ತಕಗಳು ಗರಿ ಬಿಚ್ಚಿದವು. ಅವುಗಳನ್ನು ಹುಡುಕಿ ಓದುವಾಗಲೇ ತಿಳಿದದ್ದು ದುರ್ಗದ ಪ್ರತಿ ಕಲ್ಲುಗಳು ರೋಚಕ ಕಥೆಗಳನ್ನು ಸಾರುತ್ತವೆಯೆಂದು.

ನಾನು ಹುಟ್ಟಿ ಬೆಳೆದ ಪ್ರಾಂತ್ಯದ ಚರಿತ್ರೆಯ ಬಗ್ಗೆ ತ ರಾ ಸು ಅವರ ದೃಷ್ಟಿಕೋನವನ್ನು ಓದಿ ನಿಮ್ಮೊಂದಿಗೆ ಹಂಚಿಕೊಳ್ಳುವ ಹಂಬಲದಿ….
ನಿರೀಕ್ಷಿಸಿ #knowyournative ಸರಣಿ!
.
#swarganammadurga #fortcitychitradurga #historyinspires #ka_16

ತ ರಾ ಸು ಅವರ ದುರ್ಗದ ಇತಿಹಾಸ ಸರಣಿಯ ಎಂಟು ಪುಸ್ತಕಗಳು

Leave a comment

Design a site like this with WordPress.com
Get started