ತಿರುಗು ಬಾಣ

ದುರ್ಗದ ದಂತಕಥೆ-೩/೮

ಬಂದಿಖಾನೆ,ಚಿತ್ರದುರ್ಗ ಕೋಟೆ.

“ದುರ್ಗದ ಸರ್ವಾಧಿಕಾರಿ ಮುದ್ದಣ್ಣ” ಕೇಳಿದರೆ ರೋಷ ಉಕ್ಕುತದೆ.

ನೊಂದ ಹೆಣ್ಣು ಗಿರಿಜವ್ವೆ, ಅನಾಥ ಪುತ್ರರು, ದಿಕ್ಕಿಲ್ಲದ ಹಳ್ಳಿಗರು, ರೋಸತ್ತ ಸೈನಿಕರು ಒಂದಾಗಿ ಹೆಣೆದ ಮಹಾ ಸಂಚಿಗೆ, ಬಲಿಪಶುಗಳಾದ ರಾಜದ್ರೋಹಿ, ಅಧರ್ಮಿ, ರಕ್ತಪಿಪಾಸು, ಮುದ್ದಣ್ಣ ಮತ್ತು ಸಂಗಡಿಗರ ರೋಚಕ ಕಹಾನಿ,’ತಿರುಗುಬಾಣ’.

ಪಂಜು ಉರಿದಷ್ಟು ಹಿಡಿಕೆ ಸುಡುತ್ತದೆ. ದುರ್ಗದ ಜನತೆ ಗಿರಿಜವ್ವಯ ಕ್ರೋಧಕ್ಕೆ, ಮತ್ತಿವಂಶದವರ ಮೇಲೆ ನಡೆದ ದೌರ್ಜನ್ಯಕ್ಕೆ, ಸಾಮಾನ್ಯರ ಮೇಲಿನ ಶೋಷಣೆಗೆ ಹೇಗೆ ಸ್ಪಂದಿಸುತ್ತದೆ ಎಂಬುದು ಕಥೆಯ ಒಂದು ಭಾಗವಾದರೇ,ಪರಶುರಾಮಪ್ಪ ಮತ್ತು ಭರಮಣ್ಣ ಅವರ ರಾಜತಾಂತ್ರಿಕತೆಯೇ ಇನ್ನೊಂದು ಭಾಗ.

ಮುದ್ದಣ್ಣನ ಅಹಂಕಾರ ದಿನೇ ದಿನೇ ಹೆಚ್ಚಾಗತೊಡಗಿದಾಗ
ಆ ಹೆಣ್ಣು ಗಿರಿಜವ್ವ, ಹಗಲು ರಾತ್ರಿ ಎನ್ನದೆ, ಸೇಡು ತೀರಿಸಿಕೊಳ್ಳಲು, ಕಾಡು ಮೇಡು ಅಲೆದು ಸಂಚು ಹಾಕಿ ಊರೂರು ತಿರುಗಿ ಗೌಡ್ರುಗಳನ್ನೆಲ್ಲ, ಮುದ್ದಣನ ವಿರುದ್ಧ ಎತ್ತಿ ಕಟ್ಟುವ ಆಕೆಗೆ ಸಹಾಯ ಮಾಡೋದು ನಮ್ಮ ಧರ್ಮ ಎಂದು ಪುಟ ಪುಟ ಗಳಲ್ಲೂ ಧೈರ್ಯ ಮೆರೆದ ಹಳ್ಳಿಗರು, ಸ್ವಾಮಿ ನಿಷ್ಠೆ ಮೆರೆದ ಪರುಶುರಾಮಪ್ಪ, ದಳವಾಯಿ ಭರಮಣ್ಣ ಮತ್ತು  ಋಣ ತೀರಿಸಲು ಕೆಲ ಸೈನಿಕರು ಮುದ್ದಣ್ಣನ ಅಮಿತ ಅಹಂಕಾರ ವಧೆ ಮಾಡುವ ಸಂಭಾಷಣೆಗಳೆಲ್ಲ ಕಣ್ಣ ಮುಂದೆ ಬಂದು ನಿಂತು, ಅವನ ವಿರುದ್ಧ  ಕೇಕೆ ಹಾಕುತ್ತಾ ಅಣಕಿಸಿ ನಗುತ್ತವೆ.

ಅಂತೂ ಇಂತೂ , ಮೆರೆದವರೆಲ್ಲ ಮಣ್ಣಾದವರೆ ಎಂಬುದು ಸತ್ಯವಾದ ಮಾತು ಮುದ್ದಣ್ಣನ ಸಾವಿಗೆ ೧೯೨ ಪುಟಗಳು ಕಾಯಬೇಕಾಯಿತು. ದುರ್ಗಕ್ಕೆ ಮುಕ್ತಿ ದೊರಕಿದೆ .
ಹೊಸಹಗಲು ಕಂಡಿದೆ.

#swarganamdurga #fortcitychitradurga #raktharatri #histroyinspires
#tarasu #knowyournative
#ka_16 #prouddurgans

Leave a comment

Design a site like this with WordPress.com
Get started