ದುರ್ಗದ ದಂತಕಥೆ – ೭/೮

ಕೊಲೆ, ಅಕಾಲಿಕ ಮರಣ ಅಥವಾ ರಾಜಕೀಯ ಅತಂತ್ರ ಪರಿಸ್ಥಿತಿಗಳನ್ನು ಬಿಟ್ಟು ಹೊಸದೊಂದು ವಿಷಯದ ಮೂಲಕ ಲೇಖಕರು ಓದುಗರಿಗೆ ಹೊಸತನವನ್ನು ನೀಡಿದ್ದಾರೆ. ಸೀರ್ಯದ ನಾಯಕರು ದುರ್ಗದ ನಾಯಕರ ಮಗಳನ್ನು ತಮ್ಮ ಸೊಸೆಯನ್ನಾಗಿ ಮಾಡಿಕೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿ ಕಳಿಸುವ ರಾಜಸದೊಂದಿಗೆ ಶುರುವಾಗುವ ಕಥೆ ಸರ್ಜೇ ನಾಯಕರ ರೌದ್ರಾವತಾರದೊಂದಿಗೆ ಕೊನೆಗೊಳ್ಳುತ್ತದೆ.
ವಿವಾಹ ! ಎರಡು ಕುಟುಂಬಗಳನ್ನು, ಹಲವು ಮನಸುಗಳನ್ನು ಬೆಸೆಯುವ ಕಾರ್ಯ. ರಾಜ ಮನೆತನಗಳ ವಿವಾಹ ಗಳೆಂದರೆ ಸ್ವಪ್ರತಿಷ್ಠೆ, ಒಳಸಂಚಿನ ರಾಜಕಾರಣಕ್ಕಾಗಿ ಕೆಲ ಸಂಬಂಧಗಳು ಹುಡುಕಿಕೊಂಡು ಬರುತ್ತವೆ. ‘ಕಸ್ತೂರಿ ಕಂಕಣ’ ದಲ್ಲಿಯೂ ಇಂತಹದೇ ಒಂದು ವಿವಾಹದ ಸೋಗಿನಲ್ಲಿ ನಡೆಯುವ ಕುಟಿಲ ರಾಜಕೀಯವಿದೆ!
ಇಲ್ಲಿ ತರೀಕೆರೆಯ ವೆಂಕಪ್ಪಯ್ಯನ ನೀಚ ರಾಜಕಾರಣ, ಹಿರಿಯೂರಿನ ಪಾಳೇಗಾರ ಕೆಂಚಣ್ಣ ನಾಯಕರ ನಿಷ್ಠೆ, ಕಸ್ತೂರಿ ರಂಗಪ್ಪ ನಾಯಕರ ಭ್ರಾತೃತ್ವ ,ದಳವಾಯಿ ಪ್ರಧಾನಿಗಳು ತರ್ಕಬದ್ಧವಾದ ಚಿಂತನೆ, ಸರ್ಜಾ ನಾಯಕರ ಬಿಸಿ ರಕ್ತವಿದೆ. ಈ ಎಲ್ಲಾ ಪಾತ್ರಗಳ ಬಗ್ಗೆ ೨೭೦+ ಪುಟಗಳನ್ನು ಒಂದೇ ಓದಿಗೆ ಮುಗಿಸುವಷ್ಟು ಸೊಗಸಾಗಿ ಲೇಖಕರು ಕಟ್ಟಿಕೊಟ್ಟಿದ್ದಾರೆ.
ನಾಯಕರು ಹಿರಿಯೂರಿನ ಪಾಳೇಗಾರ ಕೆಂಚಣ್ಣನ ಹೆಂಡತಿಯನ್ನು ಸಹೋದರಿಯಂತೆ ಆಧರಿಸಿ ಕೊಟ್ಟ ಮಾತನ್ನು ನೆಡೆಸಿಯೇ ತೀರಬೇಕೆಂದು ಮಾಡುವ ಹೋರಾಟದ ಪರಿಯೇ ಕಸ್ತೂರಿ ಕಂಕಣವಾಗಿದೆ.
ಇನ್ನೂ ಈ ಸರಣಿಯ ಕೊನೆಯ ಮೇರು ಕೃತಿ ದೈತ್ಯ ದಂತಕಥೆ ದುರ್ಗಾಸ್ತಮಾನದೊಂದಿಗೆ ಮತ್ತೆ ಬರುತೇನೆ.
#swarganamdurga #fortcitychitradurga #kasturikankana #histroyinspires
#tarasu #knowyournative
#ka_16 #prouddurgans