ಕಂಬನಿಯ ಕುಯಿಲು

ಇದು ಮತ್ತಿ ವಂಶದ ತಿಮ್ಮಣ ನಾಯಕರು ಸ್ಥಾಪಿಸಿದ ಐತಿಹಾಸಿಕ ದುರ್ಗದ ದಂತಕಥೆ- ೧/೮

ಒಂಟಿ ಕಲ್ಲು ಬಸವ – ದುರ್ಗದ ಕೋಟೆ.

ತ ರಾ ಸು ಅವರ ವಿಶಿಷ್ಟ ಬರವಣಿಗೆಯ ಶೈಲಿಯಲ್ಲಿ ದುರ್ಗವನ್ನು ಕಣ್ಣಮುಂದಿರಿಸಿ, ಪಾತ್ರಗಳಿಗೆ ಜೀವ ತುಂಬಿ,ಕಣ್ಣಿಗೆ ಕಟ್ಟುವ ಹಾಗೆ, ಮನಕ್ಕೆ ಮುಟ್ಟುವ ಹಾಗೆ ವಿವರಿಸಿದ್ದಾರೆ.

ದುರ್ಗದ ಇತಿಹಾಸವನ್ನು ಕಾದಂಬರಿ ರೂಪದಲ್ಲಿ ಇಷ್ಟು ಸೊಗಸಾಗಿ ದಾಖಲಿಸಲು ಯಾರಿಂದಲೂ ಸಾದ್ಯವಿಲ್ಲ.

ಕಸ್ತೂರಿರಂಗಪ್ಪನಾಯಕನ ಕೊನೆಯ ಮಗ ಮದಕರಿ ನಾಯಕ ಸಂತಾನ ಹೀನನಾಗಿ ಮರಣ ಹೊಂದಿದ ನಂತರ ದುರ್ಗದ ಮುಂದಿನ ದೊರೆ ಯಾರು  ಎಂಬುದರ  ಬಗ್ಗೆ ಇಡಿ ಕಾದಂಬರಿ ಆಧಾರಿತವಾಗಿದೆ.
ರಾಜರ ಆಳ್ವಿಕೆಯ ಕಲ್ಪನೆ, ಬಹುಪತ್ನಿತ್ವ, ಸಹಗಮನದ ಬಗ್ಗೆ ಮುಕ್ತವಾಗಿ ಇಲ್ಲಿ ಕಾಣಸಿಗುತ್ತದೆ.

ಅಣ್ಣ ಸರ್ಜೆನಾಯಕರ ಮಕ್ಕಳಿಗೆ ಅಧಿಕಾರ ಹೋಗಬೇಕು ಎನ್ನುವುದು ನ್ಯಾಯಯುತವೇ ಆದರೂ ದಳವಾಯಿಗಳ ಯೋಜನೆಗಳನರಿತ ದಿವಂಗತ ಮದಕರಿನಾಯಕರ ಮನದಿಂಗಿತ
ತನ್ನ ಕಿರಿಯ ಹೆಂಡತಿಯ ತಮ್ಮನನ್ನೆ ದತ್ತು ಪುತ್ರನಾಗಿ ಸ್ವೀಕರಿಸುವುದಾಗಿತ್ತು. ಮೂವತ್ತು ನಾಗತಿಯರು ಸಹಗಮನ ಮಾಡಿದರೆ ನಾಯಕರ ಆಸೆಯೂ ಈಡೇರದು ಎಂದು ಕೊನೆಯ ನಾಗತಿ ಹೇಳಿದಾಗ ಮೊದಲ ನಾಗತಿ ಉಳಿದುಕೊಂಡು ಹಲವು ವಿರೋಧಗಳಿದ್ದರರೂ ಮಿಕ್ಕ ವಿಧಿವಿಧಾನಗಳನ್ನು ಪೂರೈಸುತ್ತಾಳೆ. ಉಪ್ಪುಂಡ ಮನೆಗೆ ದ್ರೋಹ ಬಗೆಯ ಹೊರಟ ದಳವಾಯಿಗಳ  ವಿರೋಧಗಳ ನಡುವೆ ಒಬವ್ವನಾಗತಿಯು ಹೊಸದಾಗಿ ಪಟ್ಟಕ್ಕೆ ಬಂದ ರಾಜಕುಮಾರನನ್ನು ಹೇಗೆ ಕಾಯುತ್ತಾಳೆ!?

ಆ ತಾಯಿಮನದ ತೊಳಲಾಟ,ಲಿಂಗಣ್ಣನ ದೇಶದ ಹಿತಾಸಕ್ತಿ, ತ್ಯಾಗದ ತೇಜಸ್ಸು,ಭುವನಪ್ಪ ನ ಸಾರ್ವಕಾಲಿಕ ಸ್ವಾಮಿ ನಿಷ್ಠೆ, ಗಿರಿಜವ್ವೆಯ ಒಳಿತು ಬಯಸುವ ಮನಸ್ಸು, ದಳವಾಯಿಗಳ ಉಪಟಳ ಉಪದ್ರವಗಳು. ದಳವಾಯಿ ದೇಸಣ್ಣ ನ ಪಶ್ಚಾತ್ತಾಪದ ಬೇಗೆ  ದಳವಾಯಿ ಮುದ್ದಣ್ಣ ನ ಕ್ರೌರ್ಯ, ಅಸಂಬದ್ಧ ಸೇಡು, ಹುಚ್ಚಿ ಹನುಮವ್ವನ ಯುದ್ಧ ವಿರೋಧಿ ತೊಳಲಾಟಗಳು ಇದೆಲ್ಲವುಗಳ ಸಂಮಿಶ್ರಿತ ಮೂಖ ರೋಧನೆಯೆ,

ಕಂಬನಿಯ ಕುಯಿಲು.

ಮುಂದೆ  ಮತ್ತೆ ಸಿಗುವ.

#swarganammadurga #fortcitychitradurga #historyinspires #ka_16 #knowyournative

Leave a comment

Design a site like this with WordPress.com
Get started