ಪ್ರವಾಸದ ಕೊನೆಯ ದಿನ , ಕೊಠಡಿಗಳಲ್ಲಿ ಹಾಡು ಹಾಗೂ ಅಲಾರ್ಮಗಳ ಸದ್ದಿನ ರಣ ಕೇಕೆ ಎಲ್ಲರನ್ನೂ ನಿದ್ದೆಯಿಂದ ಎಬ್ಬಿಸಿತು. ತಯಾರಿಗೊಂಡು ಅಲ್ಪಹಾರ ಸೇವಿಸಿ ತಿಳಿಯದ ಗಮ್ಯವನ್ನು ಹುಡುಕುತ್ತಾ ಹೊರಟೆವು.
ಒಂದು ಅದ್ಭುತವಾದ ಪ್ರವಾಸ ಸ್ಥಳಕ್ಕೆ ಕರೆದೊಯ್ಯುತ್ತಾರೆ ಎಂಬ ಉತ್ಸಾಹ , ಕಾತುರತೆಯಿಂದ ಹೊರಟೆವು , ಆಸೆಗಳು ನುಚ್ಚು ನೂರಾದವು . ಯಾವುದೋ ರಸ್ತೆಯ ಪಕ್ಕದಲ್ಲಿ ವಾಹನ ನಿಲ್ಲಿಸಿ , ಅರಣ್ಯದಲ್ಲಿ ಅಲೆಮಾರಿಗಳಂತೆ ಎಲೆಗಳನ್ನು ಕೀಳುತ್ತಾ ಸಮಯ ವ್ಯರ್ಥ ಮಾಡಿಸಿದರು .

ಸುಮಾರು ೩ ಗಂಟೆಗಳ ಅವಧಿ ವ್ಯರ್ಥವಾಯಿತು. ಎಲ್ಲರೂ ಹಸಿವಿನಿಂದ ಪರದಾಡುತ್ತಿದ್ದರು. ಹತ್ತಿರದ ಜಲಪಾತ ವೀಕ್ಷಿಸಿದ ನಂತರ ಊಟ ಮಾಡುವುದಾಗಿ ನಿರ್ಧರಿಸಿದರು.
ಸುಮಾರು ೩ ಮೈಲಿಯ ಕಾಲ್ದಾರಿ , ೫ ಸದಸ್ಯರ ಗುಂಪುಗಳಂತೆ ವಿಂಗಡಿಸಿ ಮುನ್ನಡೆದೆವು . ಕಾಡುದಾರಿ , ಗಿಡ- ಮರಗಳಿಂದ ಕವಿದ ಪ್ರದೇಶ, ಕಾಲುಗಳಲ್ಲಿ ಬೇರು-ಬಳ್ಳಿಗಳ ತದೆದಾಟ , ಕಲ್ಲು – ಬಂಡೆಗಳ ಏರು ಪೇರು, ಹಗ್ಗದ ಸಹಾಯದಿಂದ ಇಳಿಜಾರು ದಾಟಿಸಿ ಕನಕುಂಬಿ ಜಲಪಾತದ ಮುಂದೆ ನಿಂತೆವು.

೧ ತಾಸಿನ ಕಾಲ ಆನಂದದಿಂದ ಸಂಬ್ರಮಿಸಿದರು , ಸಂತೋಷದಿಂದ ಕುಣಿದಾಡಿದರು , ಮೈಮರೆತು ಜಿಗಿದಾದಿದರು. ಹಿಂತಿರುಗಿ ಹೋಗುವಷ್ಟರಲ್ಲಿ ಹಸಿವು ತಾಂಡವವಾಡುತ್ತಿದ್ದು.


ಹಸಿವಿನಿಂದ ನರಳುತ್ತಿದ್ದ ವಿದ್ಯಾರ್ಥಿಗಳು ರುಚಿಕರ ಆಹಾರ ದೊರೆಯದ ಕಾರಣ ಆಹಾರ ವಿಭಾಗದ ವಿರುದ್ಧ ದಂಗೆಯೆದ್ದರು. ಅಂದಿನ ರಾತ್ರಿ ಎಲ್ಲರೂ ಒಪ್ಪುವ ಜಾಗದಲ್ಲಿ ಊಟ ಮಾಡಿಸುವ ಭರವಸೆಯ ಮೇಲೆ ಸಮಾಧಾನ ಮಾಡಿಕೊಂಡರು. ರಾತ್ರಿಯ ಭೋಜನ ಮುಗಿಸಿ ಬಳ್ಳಾರಿಗೆ ಹಿಂತಿರುಗಿದೆವು.
ಧನ್ಯವಾದಗಳೊಂದಿಗೆ…….
ನಿಮ್ಮ ಪಯಣಿಗ ,,,,,ತೇಜಸ್ ರೆಡ್ಡಿ 🖤
Greetings I am so glad I found your blog, I really
found you by error, while I was searching on Google for something else, Anyhow I am here now and would just like to say thank you for a incredible
post and a all round thrilling blog (I also love
the theme/design), I don’t have time to look over it all at the
minute but I have bookmarked it and also added your RSS feeds, so
when I have time I will be back to read a great deal more, Please do keep up the superb job.
LikeLike
Thank you
LikeLike