ಅಧ್ಯಾಯ -೩_ದಾಂಡೇಲಿ

ಶಿರಸಿ ಇಂದ ದಾಂಡೇಲಿಯತ್ತ ನಮ್ಮ ಪಯಣ ಸಾಗಿತು . ಸಂಜೆ ೫ ರ ನಂತರ ಅರಣ್ಯ ಮಾರ್ಗವಾಗಿ ಪ್ರಯಾಣಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಅನುಮತಿ ನೀಡಲಿಲ್ಲ. ಆದ್ದರಿಂದ ೪೦ ಕಿ. ಮೇ. ಹೆಚ್ಚುವರಿ ಮಾರ್ಗದಲ್ಲಿ ಸಂಚರಿಸಿ , ದಾಂಡೇಲಿ ತಲುಪಬೇಕಿತ್ತು. ನಮ್ಮ ಸ್ನೇಹಿತನ ಹುಟ್ಟು ಹಬ್ಬ ಆಚರಿಸಲೆಂದು ತಯಾರಿ ಮಾಡಲು ಒಂದು ವಾಹನ ಹಿಂದೆ ಉಳಿದಿತ್ತು . ಎಲ್ಲರೂ ಗಾಬರಿಗೊಂಡು ವಾಹನದಲ್ಲಿ ಶಿಕ್ಷಕರೇ ಇಲ್ಲವೆಂದು ಹಬ್ಬಿಸಿದರು. ಶಿಕ್ಷಕರಿಗಾಗಿ ಹುಡುಕಾಟ ನಡೆಸಿದೆವು. ನಂತರ ಗಾಬರಿಯಾಗಬೇಡಿ ಅವರು ಇಲ್ಲೇ ಇದ್ದಾರೆ , ವಾಹನಗಳ ನಡುವೆ ಅಂತರ ಕಡಿಮೆ ಮಾಡಲು ಈ ರೀತಿ ಹೇಳಿದೆವು ಎಂದರು.

ಹಠಾತ್ತಾಗಿ ಒಂದು ವಾಹನದ ಟೈರ್ ಸ್ಫೋಟಗೊಂಡಿತು. ೬೦ ವಿದ್ಯಾರ್ಥಿಗಳನ್ನು ಒಂದೇ ವಾಹನದಲ್ಲಿ ಹೊಂದಿಸಿ ಪ್ರಯಾಣ ಬೆಳೆಸಿದೆವು.

ಮಂಗನ ಕೈಗೆ ಮಾಣಿಕ್ಯ ಕೊಟ್ಟಂತೆ , ಅಧಿಕ ಪ್ರಸಂಗತೆ ಕೋತಿಗಳನ್ನು ಒಂದೇ ಕಡೆ ಸೇರಿಸಿದರೆ ಏನಾಗಿರಬಹುದು ಎಂಬುದು ಈಗಾಗಲೇ ನಿಮ್ಮ ಊಹೆಗೆ ಬಂದಿರುತ್ತದೆ. ಹೇಗೋ ರಾತ್ರಿ ೧ ಗಂಟೆಗೆ ದಾಂಡೇಲಿ ತಲುಪಿದೆವು. ಸುಮಾರು ೧೨ °c ತಾಪಮಾನ. ಅತಿಯಾದ ತಂಪಿನ ಕಾರಣ ದೇಹದಲ್ಲಿನ ಅಂಗಾಂಗಗಳ ನಡುಕ ಶುರುವಾಗಿತ್ತು.

ಸುಡುನೀರನ್ನು ಕುಡಿದು ೩ ಗಂಟೆಗೆ ಮಲಗಿದೆವು. ಬೆಳಗಿನಜವ ಸುಮಾರು ೬ ಗಂಟೆ , ಸಂಪೂರ್ಣ ಹಸಿರು ಕವಿದ ವಾತಾವರಣ .

ಅಲ್ಪಹಾರಕ್ಕೆಂದು ಹೊರಟ ನಮಗೆ , ರೋಗಿಗಳಿಗೆ ಆಹಾರವಾದ ಬ್ರೆಡ್ ಅನ್ನು ಬಡಸಿದರು. ಹೊರಟಿದ್ದ ಸ್ಥಳದ ಬಗ್ಗೆ ತಿಳಿದುಕೊಳ್ಳಲು ಆತುರ, ಉತ್ಸಾಹ ಎಲ್ಲರಲ್ಲೂ ತುಂಬಿತ್ತು. ಅರಣ್ಯದ ಮಧ್ಯೆ ವಾಸಿಸುವ ಪಾರಂಪರಿಕ ವೈದ್ಯರ ಬಳಿಗೆ ಕರೆದುಕೊಂಡು ಹೋದರು

ಏನೋ ಹೊಸದು ಕಲಿಯಲು ಹೊರಟಿದ್ದೇವೆ ಎಂದು ಕಾತುರರಾಗಿ ಇದ್ದ ನಮಗೆ ಬೇಸರವಾಯಿತು. ಅಳತೆಯ ಆಧಾರದ ಮೇಲೆ ಗಿಡ- ಮರಗಳ ವಿಭಾಗ ತಿಳಿಸಿ ಭೋದನೆ ಮುಗಿಸಿದರು. ಅಂದಿನ ದಿನದ ಸಂಪೂರ್ಣ ಸಮಯ ಅಲ್ಲೇ ವ್ಯರ್ಥವಾಯಿತು.

ಊಟಕ್ಕೆಂದು ದೇವಸ್ಥಾನಕ್ಕೆ ಕರೆದೊಯ್ದರು , ೩ ರ ಸಮಯಕ್ಕೆ ಯಾವ ದೇವಾಲಯದಲ್ಲಿಯೂ ಊಟ ದೊರೆಯದು. ಒಂದು ಚಿಕ್ಕ ತಪ್ಪು ತಿಳುವಳಿಕೆಯಿಂದ ಆಹಾರ ವಿಭಾಗದ ಹಾಗೂ ವಿದ್ಯಾರ್ಥಿಗಳಿ ನಡುವೆ ರಸ್ತೆಯಲ್ಲೆ ಮಹಾ ಯುದ್ಧವೇ ನಡೆಯಿತು.

ರೆಸಾರ್ಟಗೆ ಹಿಂತಿರುಗಿ ರಾತ್ರಿಯ ಭೋಜನ ಸ್ವೀಕರಿಸಿ , ನಂತರ ಬೆಳಗಾವಿಯತ್ತ ಪಯಣ ಸಾಗಿಸಿದೆವು.

ಮುಂದುವರೆಯುವುದು………..❤️

Leave a comment

Design a site like this with WordPress.com
Get started