ಬೆಳಗಿನಜಾವ ೬ ಗಂಟೆ ಸುಮಾರು . ಬಲಹೀನ ಹಾಗು ನಿದ್ರೆ ಇಲ್ಲದ 😴 ಮುಖಗಳನ್ನು ಶಿರಸಿಯ ಹಸಿರು ಸೊಬಗು ಆಹ್ವಾನಿಸಿತು. ತಯಾರಾಗಿ ಬರಲು ೨ ಗಂಟೆಗಳ ಕಾಲ ಸಮಯ ದೊರಕಿತ್ತು.
ನಮ್ಮ ಆಚಾರಗಳಿಂದ ಬಂದಂತೆ , ಮೊದಲನೆಯದಾಗಿ ದೇವರ ದರ್ಶನ ಪಡೆಯಬೇಕು. ಅದರಂತೆಯೇ ಶಿರಸಿಯ ಮಾರಿಕಾಂಬಾ ದೇವಿಯ ದೇಗುಲಕ್ಕೆ ಹೊರಟಿದೆವು. ಮನಸ್ಸಿನಲ್ಲಿ ದೇವರ ಮೇಲೆ ನಂಬಿಕೆ ಇಲ್ಲದವರು , ಭಕ್ತಿಯ ಮುಖವಾಡಗಳನ್ನು ಧರಿಸಿ ದೇವಿಯ ದರ್ಶನ ಪಡೆದರು.


೬೦ ಮಂದಿಗೆ ಒಮ್ಮೆಲೇ ಕೂರಲು ಯಾವುದೇ ಹೋಟೆಲುಗಳಲ್ಲಿ ಸಾಮರ್ಥ್ಯವಿರದ ಕಾರಣ , ೩ ತಂಡಗಳಾಗಿ ವಿಭಾಗಿಸಿದೆವು. ಅಲ್ಪಹಾರಕ್ಕೆಂದು ಬಂದವರು ಸಂಪೂರ್ಣ ಭೋಜನ ಮುಗಿಸಿದರು. ಮುಂದಿನ ನಿಲ್ದಾಣ ಬಕ್ಕಳ ಬೊಟಾನಿಕಲ್ ಗಾರ್ಡನ್.
ಸುಮಾರು ೪೫೦ ಎಕರೆ ಅರಣ್ಯ ಪ್ರದೇಶ , ಯಾವುದೇ ದೂರವಾಣಿ ಸಂಪರ್ಕ ಇರುವುದಿಲ್ಲ , ದಾರಿ ತಪ್ಪಿ ಹೋದರೆ ಹಿಂತಿರುಗುವುದು ತುಂಬಾ ಕಠಿಣ😅. ಔಷಧ ಸಸಿಗಳ ಎಲೆಗಳನ್ನು ಸಂಗ್ರಹಿಸುತ್ತಾ ಹೊರಟೆವು. ದಾರಿ ಸಾಗುತ್ತಾ ಗುಂಪುಗಳಾಗಿ ಇದ್ದವರು ,ಕೆಲವು ಜೋಡಿ 👫 ಹಾಗೂ ಸಮ್ಮಿಷ್ರಗಳಾಗಿ ಹೊರಹೊಮ್ಮಿದರು.

ಮಧ್ಯಾಹ್ನ ಊಟಾಕ್ಕೆ ಅಲ್ಲಿನ ಮಠಕ್ಕೆ ಹೋಗಲೆಂದು. ಮೊದಲೇ ತೀರ್ಮಾನವಾಗಿತ್ತು. ನಾವು ಮಠ ತಲುಪಿದಾಗ ಸಮಯ ೩ ಗಂಟೆ. ಆ ಸಮಯದಲ್ಲಿ ಯಾವುದೇ ದೇವಸ್ಥಾನ ಹಾಗೂ ಮಠಗಳಲ್ಲಿ ಪ್ರಸಾದ ದೊರೆಯುವುದಿಲ್ಲ. ಅಂತಿಮವಾಗಿ ಎಲ್ಲರೂ ಉಪವಾಸ ನಡೆಸಿದರು 😅. ಊಟ ದೊರೆಯಲಿಲ್ಲ ಎಂದು ನಾವು ಒಗ್ಗಲಿಲ್ಲ , ಸಹಸ್ರಲಿಂಗದ ಕಡೆಗೆ ಪ್ರಯಾಣ ಬೆಳೆಸಿದೆವು.
ನೇತ್ರಾವತಿ ಮತ್ತು ಕುಮಾರಧಾರ ನದಿಗಳ ದಡದಲ್ಲಿ ಸಾವಿರ ಲಿಂಗಗಳು ಉದ್ಭವವಾದ ಸ್ಥಾನವದು. ನೀರಿನಲ್ಲಿ ನಮ್ಮ ಪ್ರತೀ ಹೆಜ್ಜೆಯನ್ನು ಮೀನುಗಳ ಕಡಿತ ಕಚುಗುಳಿಯಂತೆ ಸ್ವಾಗತಿಸಿದವು


ಬಟ್ಟೆಗಳು ಒದ್ದೆಯಾದ ಕಾರಣ , ವಾಹನ ಮಾಲೀಕರು ನಿಂತು ಪ್ರಯಾಣ ಬೆಳೆಸಲು ತಿಳಿಸಿದರು. ನೆಲೆಸಿದ್ದ ಹೋಟೆಲಿನಲ್ಲಿ ಎಲ್ಲರೂ ತಯಾರಾಗಿ ಬಂದರು. ಇಲ್ಲಿಗೆ ಶಿರಸಿಯ ಭಾಗ ಮುಕ್ತಾಯ . ದಾಂಡೇಲಿಯ ❤️ ಕಡೆಗೆ ಪ್ರಯಾಣ ಬೆಳೆಸಿದೆವು.
ಮುಂದುವರೆಯುವುದು ………..
ಇಂತಿ ನಿಮ್ಮ ಪಯಣಿಗ
ತೇಜಸ್ ರೆಡ್ಡಿ