ಕನಸಿನ ಚಾರಣ….ವ್ಯರ್ಥವಾದ ಭಾಗ

ಸುತ್ತಲೂ ಪುಸ್ತಕ , ಕಾಗದ , ಲೇಖನಿಗಳಿಂದ ಸುತ್ತುವರಿದ ವಾತಾವರಣ. ಯಾರಿಗೂ ತಿಳಿಯದಂತೆ ಕದ್ದು ಓದುತಿದ್ದ ವಿದ್ಯಾರ್ಥಿಗಳಿಂದ ಆವರಿಸಿದ ವಸತಿ ನಿಲಯ. ಸಮಯ ಅರಿವಾಗದೇ ಕಳೆಯುತ್ತಿದ್ದ ಸಮಯ. ಅರಿವಾಗದೇ ಮುಗಿದ ಪರೀಕ್ಷೆಗಳು. ಪ್ರವಾಸ ತೆರಳಿ ಸುಮಾರು ದಿನಗಳಾಗಿತ್ತು , ಪರೀಕ್ಷೆ ಮುಗಿಸಿದ ಖುಷಿಯಲ್ಲಿ, ಅದೇ ವೇಗದಲ್ಲಿ ಸ್ನೇಹಿತರೊಂದಿಗೆ ಹೊರಟ ಆ ಪಯಣ ರೋಮಾಂಚಕ ತಿರುವುಗಳನ್ನು ಕಂಡಿತು .

ನಾವು ಹೊರಟದ್ದು ಒಂದು ಜಾಗ , ತಲುಪಿದ್ದು ಇನ್ನೊಂದು, ನಂತರ ತಿರುವು ನೀಡಿದ್ದು ಯಾವುದೋ ಕಡೆಗೆ.

ಮೊದಲಿಗೆ ಹುಬ್ಬಳ್ಳಿಯತ್ತ ಸಾಗಿದ ನಮ್ಮ ಪ್ರಯಾಣ ಖುಷಿ , ತಮಾಷೆಗಳೊಂದಿಗೆ ದೂರದ ಪಯಣ ತಿಳಿಯದಂತೆ ನಡೆಯಿತು. ಅಂತೂ ಸಂಜೆ ೭ ಗಂಟೆಗೆ ಹುಬ್ಬಳ್ಳಿ ತಲುಪಿದೆವು. ಇಲ್ಲಿಯವರೆಗೂ ನಾವು ಹೊರಟಿದ್ದ ಸ್ಥಳದ ಬಗ್ಗೆ ನಿಮಗೂ ತಿಳಿದಿಲ್ಲ ಹಾಗೂ ನನ್ನ ಜೊತೆ ಹೊರಟಿದ್ದ ನನ್ನ ಸ್ನೇಹಿತರಿಗೂ ಮಾಹಿತಿ ಇರಲಿಲ್ಲ.

ನಾವು ಹೊರಟದ್ದು ಭಾರತ ದೇಶದ ಅತೀ ಎತ್ತರದ ಜಲಪಾತ , ದೂಧ್ ಸಾಗರ್ . ಟ್ರೆಕ್ಕಿಂಗ್ ಮುಖಾಂತರ ಹೋಗುವುದು ನಿಷೇಧ ಹಾಗೂ ಅಪರಾಧ. ಮುಂಜಾನೆ ೩ ಗಂಟೆಗೆ ರೈಲು ಕ್ಯಾಸ್ಟ್ಲೇ ರಾಕ್ ನಿಲ್ದಾಣ ತಲಪುತ್ತದೆ , ಅಲ್ಲಿಂದ ೧೩ ಕಿ.ಮೀ. ರೈಲು ಅಳಿಗಳ ಮೇಲೆ ನಡೆಯಬೇಕು . ಫೋನ್ , ಆಹಾರ ಹಾಗೂ ನೀರು ದೊರೆಯುವುದಿಲ್ಲ . ಸ್ವಲ್ಪ ಅಪಾಯಕಾರಿಯಾಗಿ ಇರುವುದು ಎಂದು ಹುಬ್ಬಳ್ಳಿ ರೈಲ್ವೇ ನಿಲ್ದಾಣದಲ್ಲಿ ಊಟ ಮಾಡುತ್ತಾ ತಿಳಿಸಿದೆನು .

ಸಂತೋಷ , ಆನಂದ ಮತ್ತು ಉತ್ಸಾಹದಿಂದ ತುಂಬಿದ್ದ ಅವರ ಮುಖಚಿತ್ರಗಳು ಭಯ , ನಿರಾಸೆ ಮತ್ತು ನಿರುತ್ಸಾಹಕ್ಕೆ ತಿರುಗಿದವು. ಹೇಗೋ ಧೈರ್ಯ ತುಂಬಿದೆ, ಊಟಾ , ನೀರು ಮತ್ತು ಅಗತ್ಯವಾದ ವಸ್ತುಗಳನ್ನು ಕೊಂಡೆವು. ಸಮಯ ರಾತ್ರಿ ೧೧:೩೦, ನಿಲ್ದಾಣಕ್ಕೆ ರೈಲಿನ ಆಗಮನವಾಯಿತು, ನಿಲ್ಲಲೂ ಜಾಗ ಸಾಲದು.

೩ ರೇ ಗಂಟೆಗಳ ಪಯಣ, ಎಂಬ ಧೈರ್ಯದಿಂದ ಮೀಸಲಾತಿ ವಿಭಾಗಕ್ಕೆ ಹೊರಟೆವು. ೧ ಸೀಟು ಖಾಲಿ ಇತ್ತು. ಹಾಸಿಗೆ ಇದ್ದಷ್ಟು ಕಾಲು ಚಾಚಿ ಎಂಬಂತೆ ಅಷ್ಟೇ ಜಾಗದಲ್ಲಿ ೪ ಮಂದಿ ಕೂತು ಪ್ರಯಾಣ ಬೆಳೆಸಿದೆವು .

ಬೆಳಗಿನಜಾವ ೩:೩೦ ಸುಮಾರು , ರೈಲು ಕ್ಯಾಸ್ಟ್ಲೆ ರಾಕ್ ನಿಲ್ದಾಣಕ್ಕೆ ತಲುಪಿತು. ಸಂಪೂರ್ಣ ಕತ್ತಲು ,ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ಮಳೆಯಲ್ಲಿ ೧೪ ಕಿ ಮಿ ದೂರ , ೧೩ ಗುಹೆಗಳನ್ನು ದಾಟಿ ಹೋಗುವುದು ಅಪಾಯಕಾರಿ ಮತ್ತು ಅಸಾಧ್ಯ ಎಂದು ತಿಳಿದು , ನಮ್ಮ ಪ್ರಯಾಣವನ್ನು ಮುಂದುವರಿಸಿ ವಾಸ್ಕೋ ಡಿ ಗಾಮ ಕ್ಕೆ ತೆರಳಲು ನಿರ್ಧರಿಸಿದೆವು.

Dudh sagar

ಮನಸ್ಸಿಗೆ ಬೇಸರ , ಕಣ್ಣಾಂಚಿನಲ್ಲಿ ನೀರು. ಜಲಪಾತ ನೋಡುವ ಆಸೆ ಮುರಿದು , ಪ್ರಯಾಣ ಮುಂದುವರೆಸಿದೆವು. ೧೩ ಗುಹೆಗಳನ್ನು ದಾಟಿದ ನಂತರ ಸಿಗುವ ಜಲಪಾತ ನೋಡಲು ,ಗುಹೆಗಳ ಸಂಖ್ಯೆ ಎಣಿಸುತ್ತಾ ಬಾಕಿಲಿನಲ್ಲಿ ಕುಳಿತಿದ್ದನು . ಕತ್ತಲೆಯಲ್ಲಿ ಬೆಳ್ಳಗೆ ಇರುವ ದೊಡ್ಡ ಛತ್ರಿ ಆಕಾರದಲ್ಲಿ ಜಲಪಾತ ಕಾಣಿಸಿತು.

ಬೆಳಗ್ಗೆ ೬:೩೦ , ಗೋವಾ ತಲುಪಿದೆವು. ಅಲ್ಲಿಂದ ಪಣಜಿ ೬೦ ನಿಮಿಷಗಳ ಪ್ರಯಾಣ.

Ghule alone in million😍

ಹಿಂದಿನಸಲ ಭೇಟಿ ನೀಡಿದಾಗ ನೇಲೆಸಿದ್ದ ಲಾಡ್ಜ್ನಲ್ಲಿ ನೆಲೆಸಿದೇವು. ಅಲ್ಫ ಆಹಾರ ಸೇವಿಸಿ ಸಮುದ್ರದ ಕಡೆ ಹೆಜ್ಜೆಗಳು ಸಾಗಿದವು.

Macha❤️
@baga beach

ಬಿಸಿಲು , ಸಮುದ್ರದ ಉಪ್ಪು ೨ ಗಂಟೆಗಳಲ್ಲಿ ನಮ್ಮನ್ನು ಬಲಹೀನರನ್ನಾಗಿ ಮಾಡಿತು , ನಂತರ ಊಟಕ್ಕಾಗಿ ಪರದಾಡಿದೆವು . ಸಾಯಂಕಾಲ ಗೋವಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು , ಮಾರನೆಯ ದಿನ ಹಿಂತಿರುಗಲು ಹೊರಟ ನಮ್ಮ ಪ್ರಯಾಣ ಹುಬ್ಬಳ್ಳಿಯಲ್ಲಿ ದಾವಣಗೆರೆ ಮುಖಾಂತರ ಚಿತ್ರದುರ್ಗಕ್ಕೆ ತಿರುಗಿತು .

ಇಂತಿ ನಿಮ್ಮ ಪಯಣಿಗ

– ತೇಜಸ್ ರೆಡ್ಡಿ .

2 thoughts on “ಕನಸಿನ ಚಾರಣ….ವ್ಯರ್ಥವಾದ ಭಾಗ

Leave a comment

Design a site like this with WordPress.com
Get started